ಮಂಡ್ಯ: ಬಿರುಗಾಳಿ ಸಹಿತ ಬಾರಿ ಮಳೆ ಹಿನ್ನೆಲೆ ಚಲಿಸುತ್ತಿದ್ದ ಟ್ರೈನ್ ಮೇಲೆ ಮರ ಬಿದ್ದಿರುವ ಘಟನೆ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ನಡೆದಿದೆ.
ಪರಿಣಾಮ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಶ್ವಮಾನವ ರೈಲಿನ ಮುಂಭಾಗದ ಗ್ಲಾಸ್ ಪುಡಿ ಪುಡಿ, ಪೈಲಟ್(ಚಾಲಕನಿಗೆ)ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯದ ನಡುವೆಯು ಪೈಲಟ್(ಚಾಲಕ) ಟ್ರೈನ್ ಅನ್ನು ಮಂಡ್ಯ ರೈಲ್ವೆ ನಿಲ್ದಾಣದ ವರೆಗು ತಂದಿದ್ದಾರೆ. ಗಾಯಾಳು ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ.
ಸದ್ಯ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ಇದೆ. ರೈಲ್ವೆ ಸಿಬ್ಬಂದಿ ಒಡೆದ ಗ್ಲಾಸ್ ಬದಲಿಸುತ್ತಿದ್ದಾರೆ. ಗ್ಲಾಸ್ ಬದಲಿಸಿದ ಬಳಿಕ ಮೈಸೂರಿನತ್ತ ರೈಲು ಹೊರಡಲಿದೆ.