Wednesday, May 21, 2025
Google search engine

Homeರಾಜಕೀಯಹೆಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣದಲ್ಲಿ ಸಂಚು: ಸಾ.ರಾ ಮಹೇಶ್ ಆರೋಪ

ಹೆಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣದಲ್ಲಿ ಸಂಚು: ಸಾ.ರಾ ಮಹೇಶ್ ಆರೋಪ

ಮೈಸೂರು: ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣದಲ್ಲಿ ಸಂಚು ನಡೆದಿದೆ ಎಂದು ಜೆಡಿಎಸ್‌ ನ ಹಿರಿಯ ಮುಖಂಡ ಸಾ.ರಾ.ಮಹೇಶ್‌ ಹೇಳಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ. ಆರ್ ನಗರ ಮಹಿಳೆ ಅಪಹರಣ ಪ್ರಕರಣದ ಎಫ್​ಐಆರ್ ದಾಖಲಾಗುವ ಮುನ್ನವೆ ಸತೀಶ್ ಬಾಬು ಅವರನ್ನು ಎಸ್‌ಐಟಿ ವಶಕ್ಕೆ ಪಡೆಯಲಾಗಿತ್ತು ಎಂದು ಆರೋಪಿಸಿದ್ದಾರೆ.

ಕೆ.ಆರ್ ನಗರದ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ರಾತ್ರಿ 9.30ಕ್ಕೆ ಪ್ರಕರಣ ದಾಖಲಾಗಿದೆ. ಆದರೆ, ಅದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸತೀಶ್ ಬಾಬು ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಇದಕ್ಕೆ ನಮ್ಮಲ್ಲಿ ಸಾಕ್ಷಿಗಳಿವೆ ಎಂದು ಅಚ್ಚರಿ ಮಾಹಿತಿ ಹೊರ ಹಾಕಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಅವರನ್ನು ಕರೆದ್ಯೊಯುತ್ತಿರುವ ವಿಡಿಯೋ ದಾಖಲೆ ನಮ್ಮ ಬಳಿ ಇದೆ. ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಡಿಲಿಟ್ ಮಾಡಿಕೊಟ್ಟಿದ್ದಾರೆ. ಆದರೆ, ಮತ್ತೊಬ್ಬ ಮೊಬೈಲ್ ವಿಡಿಯೋ ಮಾಡಿ ಅದನ್ನು ಬೇರೊಬ್ಬರಿಗೆ ಕಳುಹಿಸಿದ್ದಾನೆ. ಮೈಸೂರಿನಿಂದ ಸಬ್​ ಇನ್‌ಸ್ಪೆಕ್ಟರ್​ವೊಬ್ಬರು ಆಲ್ಟೊ ಕಾರಿನಲ್ಲಿ ಹೋಗಿ ದಾಖಲೆಗಳನ್ನು ನಾಶ ಮಾಡಿದ್ದಾರೆ. ಇಷ್ಟೆಲ್ಲ ಸಾಕ್ಷಿಗಳು ನಮ್ಮ ಬಳಿ ಇದ್ದು, ಇದನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.

ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಹುಡುಗ ಅಮಾಯಕನಾಗಿದ್ದು, ಆತನಿಗೆ ಹಣ ನೀಡಿ ಖಾಲಿ ಪೇಪರ್‌ನಲ್ಲಿ ಸಹಿ ಪಡೆದುಕೊಂಡಿದ್ದಾರೆ. ದೂರು ಕೊಟ್ಟ ಯುವಕ ಈಗ ಎಲ್ಲಿದ್ದಾನೆ?, ಎಲ್ಲಿಗೆ ಹೋಗಿದ್ಧಾನೆ ಎಂದು ಪ್ರಶ್ನಿಸಿದರು.

ದೂರು ಕೊಟ್ಟ ಯುವಕ ಈವರೆಗೂ ಆತ ಎಲ್ಲಿ ಹೋಗಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ. ಆ ಮಹಿಳೆ ಬಳಿಯೂ ಈವರೆಗೆ 164ಎ ಹೇಳಿಕೆ ಏಕೆ ದಾಖಲಿಸಿಲ್ಲ. ಆಕೆ ತೋಟದ ಮನೆಗೆ ಹೋಗಿದ್ದು ಸತ್ಯ. ಇದಕ್ಕೆ ಅಲ್ಲಿರುವವರು ಸಾಕ್ಷಿ ಇದ್ದಾರೆ. ಅವರು ಹೇಳುವಂತೆ ಆಕೆ ಕುರಿ ಕಾಯುವಿಕೆ ಕೆಲಸ ಮಾಡುತ್ತಿದ್ದಳು. ಕುರಿ ಕಾಯುತ್ತಿದ್ದ ಮೇಲೆ ಕಿಡ್ನ್ಯಾಪ್​ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular