Friday, June 13, 2025
Google search engine

Homeಅಪರಾಧಬೆಂಗಳೂರು: ವಿಡಿಯೋ ಕಾಲ್ ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ಜಿಮ್​​ ಟ್ರೈನರ್ ಸಾವು

ಬೆಂಗಳೂರು: ವಿಡಿಯೋ ಕಾಲ್ ನಲ್ಲಿ ಪತ್ನಿಗೆ ಹೆದರಿಸಲು ಹೋಗಿ ಜಿಮ್​​ ಟ್ರೈನರ್ ಸಾವು

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಮೃತಪಟ್ಟಿರುವಂತಹ ಘಟನೆ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.

ಬಿಹಾರ ಮೂಲದ ಅಮಿತ್ ಕುಮಾರ್(28) ಮೃತ ದುರ್ದೈವಿ.

ಅಮಿತ್ ಕುಮಾರ್​ ಜಿಮ್ ಟ್ರೈನರ್ ಆಗಿದ್ದು, 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ಓರ್ವ ಯುವತಿಯನ್ನು ಪ್ರೀತಿಸಿದ್ದ. ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು.

ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ಪತಿಗೆ ಸಮಯ ನೀಡುತ್ತಿರಲಿಲ್ಲ ಎನ್ನಲಾಗುತ್ತಿದ್ದು, ಫ್ರೆಂಡ್ಸ್‌ ಜೊತೆ ಪದೇ ಪದೇ ಫೋನ್ ಕಾಲ್​ನಲ್ಲಿರುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.

ಹೀಗಾಗಿ ಪತಿ ತೊರೆದ ಪತ್ನಿ ಬೇರೆಡೆ ವಾಸವಿದ್ದರು. ಮನೆಗೆ ಪತ್ನಿ ವಾಪಾಸ್ ಬರುವಂತೆ ಪತಿ ಅಮಿತ್ ಪದೇ ಪದೇ ಕರೆ ಮಾಡಿ ಮನವಿ ಮಾಡುತ್ತಿದ್ದ. ನಿನ್ನೆ ಕೂಡ ವಿಡಿಯೋ ಕಾಲ್​ನಲ್ಲಿರುವಾಗಲೇ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಸಾವನ್ನಪ್ಪಿದ್ದಾರೆ. ಬಾಗಲಗುಂಟೆಯ ಪತಿ ಮನೆಯಲ್ಲಿ ನೇಣುಬಿಗಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ.

ಸದ್ಯ ಮರಣೋತ್ತರ ಪರೀಕ್ಷೆಗೆ ಅಮಿತ್ ಕುಮಾರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಂದು ವಿಕ್ಟೋರಿಯಾದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular