Friday, May 23, 2025
Google search engine

Homeರಾಜ್ಯಸುದ್ದಿಜಾಲಪೂರ್ವ ಸಿದ್ಧತೆಯಿಂದ ಮಳೆ ಹಾನಿ ತಡೆಯಲು ಸಾಧ್ಯ

ಪೂರ್ವ ಸಿದ್ಧತೆಯಿಂದ ಮಳೆ ಹಾನಿ ತಡೆಯಲು ಸಾಧ್ಯ

ಮಂಗಳೂರು (ದಕ್ಷಿಣ ಕನ್ನಡ) : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿಂದು ಪ್ರವಾಹ ರಕ್ಷಣಾ ತಂಡಗಳ ಪೂರ್ವಸಿದ್ಧತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟ ಮುರಲೀ ಮೋಹನ್ ಚೂಂತಾರು ಅವರು ಪ್ರವಾಹ ರಕ್ಷಣಾ ತಂಡದ ಸಾಮಾಗ್ರಿಗಳಾದ ಆಸ್ಕಾ ಲೈಟ್, ಲೈಫ್ ಜಾಕೆಟ್, ಲೈಫ್ ಬಾಯ್,ಬೋಟ್ ಮತ್ತು ಹಗ್ಗಗಳನ್ನು ಸರಿಯಾಗಿದೆಯೇ ಎಂದು ಪರೀಕ್ಷಿಸಿ, ಪ್ರವಾಹ ರಕ್ಷಣಾ ತಂಡವನ್ನು ಸಿದ್ಧ ಪಡಿಸಿ, ಪ್ರವಾಹ ರಕ್ಷಣಾ ತಂಡದ ಸದಸ್ಯರುಗಳಿಗೆ ಪ್ರವಾಹ ರಕ್ಷಣೆಯನ್ನು ಯಾವ ರೀತಿಯಾಗಿ ಮಾಡುವುದು ಎಂದು ಮಾರ್ಗಸೂಚನೆ ನೀಡಿದರು. ಜಿಲ್ಲಾ ಕಛೇರಿಯಿಂದ ತುರ್ತುಕರೆ ಬಂದಾಗ ತಯಾರಾಗಿರುವಂತೆ ರಕ್ಷಣಾ ತಂಡದ ಸದಸ್ಯರುಗಳಿಗೆ ಸೂಚನೆ ನೀಡಿದರು.

ಕೇಂದ್ರ ಕಛೇರಿಯಿಂದ ನೀಡಲಾದ ಬೋಟ್‌ಗಳನ್ನು ಹಾಗೂ ಪ್ರವಾಹ ರಕ್ಷಣಾ ಸಾಮಾಗ್ರಿಗಳನ್ನು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ದಿನೇಶ್ ಬಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತರಬೇತುದಾರ ಶ್ರೀ ಮಹೇಶ್, ಉಳ್ಳಾಲ ಘಟಕಾಧಿಕಾರಿ ಸುನಿಲ್, ಪಣಂಬೂರು ಘಟಕಾಧಿಕಾರಿ ಶಿವಪ್ಪ ನಾಯ್ಕ್,ಸುರತ್ಕಲ್ ಘಟಕಾಧಿಕಾರಿ ರಮೇಶ್, ಗೃಹರಕ್ಷಕರಾದ ಸುನಿಲ್, , ಗಿರೀಶ್, ದಿವಾಕರ, ಜನಾರ್ದನ,ಸಂತೋಷ್, ಮಂಜುನಾಥ, ಜೀವನ್ ರಾಜ್, ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular