Thursday, May 22, 2025
Google search engine

Homeರಾಜ್ಯಸುದ್ದಿಜಾಲವಿಜೃಂಭಣೆಯಿಂದ ನಡೆದ ಶ್ರೀ ಕಾಳಿಕಾಂಬ ಅಮ್ಮನವರ ೧೭ನೇ ವರ್ಷದ ವಾರ್ಷಿಕೋತ್ಸವ

ವಿಜೃಂಭಣೆಯಿಂದ ನಡೆದ ಶ್ರೀ ಕಾಳಿಕಾಂಬ ಅಮ್ಮನವರ ೧೭ನೇ ವರ್ಷದ ವಾರ್ಷಿಕೋತ್ಸವ

ಪಿರಿಯಾಪಟ್ಟಣ: ಬೆಕ್ಕರೆ ಗ್ರಾಮದ ಶ್ರೀ ಕಾಳಿಕಾಂಬ ಅಮ್ಮನವರ ದೇವಾಲಯದ ೧೭ನೇ ವರ್ಷದ ವಾರ್ಷಿಕೋತ್ಸವ ಸಾಂಪ್ರದಾಯಕವಾಗಿ ವಿಜೃಂಭಣೆಯಿಂದ ಜರುಗಿತು.

ಅರ್ಚಕರಾದ ರಾಮಸ್ವಾಮಾಚಾರ್, ಚಂದ್ರಶೇಖರ್, ನಂದೀಶ್, ನಾಗೇಂದ್ರಾಚಾರ್ ನೇತೃತ್ವದಲ್ಲಿ ಅಮ್ಮನವರಿಗೆ ವಿಶೇಷ ಅಭಿಷೇಕ ಕುಂಕುಮಾರ್ಚನೆ ನಡೆದ ಬಳಿಕ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಬೆಕ್ಕರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು, ಈ ಸಂದರ್ಭ ವಿಶ್ವಕರ್ಮ ಜನಾಂಗದ ಯಜಮಾನರಾದ ವಿರೂಪಾಕ್ಷಾಚಾರ್, ದೇವಾಲಯ ಸಮಿತಿ ಅಧ್ಯಕ್ಷರಾದ ಸೋಮಶೇಖರ್ ಪದಾಧಿಕಾರಿಗಳಾದ ಚಂದ್ರಶೇಖರ್, ಭಾಸ್ಕರ್, ಸೋಮಶೇಖರ್, ಶಿಕ್ಷಕ ಸತೀಶ್, ವಿಶ್ವೇಶ್ವರಾಚಾರ್, ನಾಗಭೂಷಣ್ ಆರಾಧ್ಯ, ನಂಜುಂಡಸ್ವಾಮಿ, ಮೋಹನ್ ರಾಜೇಅರಸ್, ಲೋಕೇಶ್ ಮತ್ತು ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular