ಪಿರಿಯಾಪಟ್ಟಣ: ತಾಲೂಕಿನ ಕಿರನಲ್ಲಿ ಗೇಟ್ ನಿವಾಸಿ ಮಧುಸೂದನ್ ನಾಪತ್ತೆಯಾಗಿದ್ದಾರೆ. ಏಪ್ರಿಲ್ 4ನೇ ತಾರೀಕಿನಂದು ಬೆಂಗಳೂರಿನಲ್ಲಿನ ಸಹೋದರನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋದವರು ಇದುವರೆಗೂ ಪತ್ತೆಯಾಗಿಲ್ಲ ಸಂಬಂಧಿಕರು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯದ ಕಾರಣ ಆತನ ತಾಯಿ ಲಕ್ಷ್ಮಮ್ಮ ಮಗ ಕಾಣೆಯಾಗಿರುವ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿ ಚಹರೆ: ಅಂದಾಜು 30 ವರ್ಷ, ಕೋಲು ಮುಖ, ಸಾಧಾರಣ ಮೈಕಟ್ಟು, ಬೆಳಗಿನ ಮೈಬಣ್ಣ, ಕನ್ನಡ ಉರ್ದು ಮಲಯಾಳಂ ಭಾಷೆ ಮಾತನಾಡುತ್ತಾರೆ, ಈತನ ಬಗ್ಗೆ ಸುಳಿವು ದೊರೆತವರು ಪಿರಿಯಾಪಟ್ಟಣ ಪೊಲೀಸ್ ಠಾಣೆ ದೂರವಾಣಿ 08223-273100 ಅಥವಾ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಇನ್ಸ್ಪೆಕ್ಟರ್ ರಾಘವೇಂದ್ರ ಕೋರಿದ್ದಾರೆ.