ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಷ್ಟ್ರೀಯ ಹೆದ್ದಾರಿಯನ್ನು ಮಾಡುತ್ತಿರುವ ಅಧಿಕಾರಿಗಳು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲವೆಂದು ರಸ್ತೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ವೆಂದು ರೈತರು ಪ್ರತಿಭಟಿಸಿ ರಸ್ತೆ ಮಾಡಲು ಬಿಡದೆ ಅಡ್ಡಗಟ್ಟಿದ ಪ್ರಸಂಗ ಇಂದು ನಡೆಯಿತು.
ಸಾಲಿಗ್ರಾಮ ಸಮೀಪ ಕಳ್ಳಿ ಮುದ್ದನಹಳ್ಳಿ ಗ್ರಾಮದ ಹತ್ತಿರ ರೈತ ಹರೀಶ ಮತ್ತು ಇತರರು ಭೂಮಿ ಪರಿಹಾರ ನೀಡಿಲ್ಲವೆಂದು ಪರಿಹಾರ ನೀಡುವ ತನಕ ನಮ್ಮ ಭೂಮಿಯನ್ನು ರಸ್ತೆ ಮಾಡಲು ಬಿಡುವುದಿಲ್ಲ ವೆಂದು ಪ್ರತಿಭಟಿಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಅಕ್ರೋಶವನ್ನು ಹೊರಹಾಕಿದರು. ಪ್ರಾಣವನ್ನಾದರೂ ಬಿಟ್ಟೆವು ಭೂಮಿಯನ್ನು ಕೊಡುವುದಿಲ್ಲವೆಂದು ಆಟ ಹಿಡಿದ ರೈತ ಮುಖಂಡರ ಮನ ವಲಿಸುವಲ್ಲಿ ವಿಫಲವಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ವಿರುದ್ಧ ತಮ್ಮ ಎಂದಿನ ಆಕ್ರೋಶವನ್ನು ಹೊರ ಹಾಕಿದ ರೈತ ಮುಖಂಡರುಗಳು ಕೇವಲ ಕಣ್ಣೊರೆಸಿ ರಸ್ತೆ ಮಾಡಿದ ನಂತರ ಇತ್ತ ತಿರುಗಿ ನೋಡದ ಅಧಿಕಾರಿಗಳು ನೀವು ಈಗ ಏಕೆ ಬಂದಿದ್ದೀರಿ ಒಂದು ವರ್ಷದಿಂದ ಎಲ್ಲಿ ಹೋಗಿದ್ದೀರಿ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ ಪ್ರಸಂಗ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು( ಕೆ ಶಿಪ್ ) ರೈತರು ಪ್ರತಿಭಟನೆ ಮಾಡುವ ಜೊತೆಗೆ ಭೂಮಿಯನ್ನು ಬಿಡುವುದಿಲ್ಲ ಎಂಬುದನ್ನು ತಿಳಿದು ಪೊಲೀಸ ಇಲಾಖೆಯ ಮರೆ ಹೋಗಿದ್ದು ಈ ಸಂದರ್ಭದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಮುಕ್ಕಂ ಹೂಡಿದರು ಸಾಲಿಗ್ರಾಮದ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜ ಕೆ ಆರ್ ನಗರದ ಇನ್ಸ್ಪೆಕ್ಟರ್ ಪಿ ಪಿ ಸಂತೋಷ್ ಇಬ್ಬರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದರು.
ಯಾವುದೇ ಒತ್ತಡಕು ಮಣಿಯದ ರೈತರು ನಮಗೆ ಪರಿಹಾರ ನೀಡುವ ತನಕ ಭೂಮಿಯನ್ನು ನೀಡುವುದಿಲ್ಲ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಭೂಮಿಯನ್ನು ಸರ್ವೆ ಮಾಡಿಸಿ ನಮ್ಮ ಭೂಮಿ ಮತ್ತು ತೆಂಗಿನ ಮರಗಳ ಪರಿಹಾರವನ್ನು ಕೊಡಿಸುವಂತೆ ಒತ್ತಾಯಿಸಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಆದರೆ ಪೊಲೀಸ್ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಮುಂದಾಗ ಬಹುದಾದ ಅನಾಹುತವನ್ನು ತಪ್ಪಿಸಿದರು.
ನಂತರ ಸಾಲಿಗ್ರಾಮದ ಇನ್ಸ್ಪೆಕ್ಟರ್ ಕೃಷ್ಣರಾಜ ಮಧ್ಯಪ್ರವೇಶಿಸಿ ಯಾವ ಭೂಮಿಗೆ ಪರಿಹಾರ ನೀಡಲಾಗಿದೆಯೋ ಅಲ್ಲಿ ರಸ್ತೆ ಕಾಮಗಾರಿ ಮಾಡಿ ಪರಿಹಾರ ನೀಡಿಲ್ಲ ಎನ್ನುವ ಭೂಮಿಯ ಪರಿಹಾರ ನೀಡಿ ನಂತರ ಕಾಮಗಾರಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ತಿಳಿಸಿದರು ಹಾಗೂ ಕೆಲವು ವ್ಯತ್ಯಾಸಗಳಾಗಿದ್ದರು ಇದನ್ನು ಸರಿಪಡಿಸದ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಇನ್ಸ್ಪೆಕ್ಟರ್ ಕೃಷ್ಣರಾಜ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತು ರೈತರನ್ನು ಸಮಾಧಾನಪಡಿಸುವ ಜೊತೆಗೆ ಪರಿಹಾರ ಜೊತೆಗೆ ವ್ಯವಸ್ಥಿತವಾದ ಕಾಮಗಾರಿಯನ್ನು ಮಾಡುವ ಭರವಸೆಯನ್ನು ನೀಡಿದರು. ಇಬ್ಬರು ಪೊಲೀಸ್ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ರೈತರು ನಮ್ಮ ಭೂಮಿಗೆ ಮತ್ತು ನಮ್ಮ ಮರ ಗಿಡಗಳಿಗೆ ಪರಿಹಾರ ನೀಡುವ ಭರವಸೆಯೊಂದಿಗೆ ಕಾಮಗಾರಿಯನ್ನು ಮಾಡಲು ಅನುವು ಮಾಡಿಕೊಟ್ಟರು.
ಒಟ್ಟಾರೆಯಾಗಿ ಕೋಟಿಗಟ್ಟಲೆ ಕಾಮಗಾರಿ ಮಾಡುವ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ ಅಲ್ಲಿಯ ರೈತರು ರೈತರ ಮತ್ತು ನಾಗರಿಕರ ಸಮಸ್ಯೆ ಕೇಳದ ಅಧಿಕಾರಿಗಳು ಉಡಾಫೆ ಮತ್ತು ದರ್ಪದಿಂದ ಕೆಲಸ ಮಾಡುತ್ತಿದ್ದು ಇದನ್ನು ಕೇಳುವ ಮತ್ತು ಪ್ರತಿಪಡಿಸುವವರು ಇಲ್ಲದಂತಾಗಿದ್ದು ಚುನಾವಣೆಯಲ್ಲಿ ಮತ ಕೇಳಲು ಬರುವ ಚುನಾಯಿತ ಜನಪ್ರತಿನಿಧಿಗಳು ಮತ್ತು ಮುಖಂಡರು ಇಂದು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಹರಿಸುವಲ್ಲೂ ವಿಫಲವಾಗಿದ್ದು ಇಂಥ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕಾ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ಇಲಾಖೆ ಅಧಿಕಾರಿಗಳು ರೈತರು ಮತ್ತು ನಾಗರಿಕರು ಸೇರಿದಂತೆ ನೂರಾರು ಜನ ಸ್ಥಳದಲ್ಲಿ ಹಾಜರಿದ್ದರು.