ಮೈಸೂರು: ನಗರದ ನಝರಬಾದ್ ನಲ್ಲಿರುವ ಮೈಲಾರಿ ಹೋಟೆಲ್‌ಗೆ ಇಂದು ಶುಕ್ರವಾರ ತೆರಳಿದ ಸಿಎಂ ಸಿದ್ಧರಾಮಯ್ಯ ದೋಸೆ, ಇಡ್ಲಿ ಸವಿದರು.
ನಗರದಲ್ಲಿರುವ ವಿನಾಯಕ ಮೈಲಾರಿ ಹೋಟೆಲ್ ಊಟ ತಿಂಡಿಗಳಿಗೆ ಬಹಳ ಫೇಮಸ್ಸು ಅಂತ ಕನ್ನಡಿಗರಿಗೆ ಗೊತ್ತಿರದ ವಿಷಯವೇನಲ್ಲ. ೧೯೩೮ ರಲ್ಲಿ ಅಂದರೆ ಸುಮಾರು ೮೫ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೋಟೆಲ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿರಪರಿಚಿತ ಗ್ರಾಹಕ. ತಮ್ಮವಿದ್ಯಾರ್ಥಿ ಜೀವನದ ದಿನಗಳಿಂದ ಅವರು ಅಲ್ಲಿನ ಮಸಾಲೆ ದೋಸೆ ಸವಿಯಲು ಹೋಗುತ್ತಿದ್ದಾರೆ. ಮೈಸೂರಲ್ಲಿರುವ ಅವರು ಇಂದು ತಿಂಡಿ ತಿನ್ನಲು ಅಲ್ಲಿಗೆ ಹೋದರು. ಹೋಟೆಲ್ ಹಿಂಭಾಗದ ಸೀಟಲ್ಲಿ ಕುಳಿತಿರುವ ಮುಖ್ಯಮಂತ್ರಿಯ ಸುತ್ತ ಜನ ನೆರೆದಿದ್ದಾರೆ.
ಹೋಟೆಲ್ ಸಿಬ್ಬಂದಿ ಸಹ ಅವರ ಮುಂದೆ ಕೈಕಟ್ಟಿ ನಿಂತಿರುವುದರಿಂದ ಉಳಿದ ಗ್ರಾಹರನ್ನು ವಿಚಾರಿಸಲು ಜನ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ. ಮೈಲಾರಿ ಹೋಟೆಲ್ ಹೊರಭಾಗದಲ್ಲೂ ಮುಖ್ಯಮಂತ್ರಿಯವರ ಅಗರಕ್ಷಕರು ಮತ್ತು ಪೊಲೀಸರು. ಅವರೆಲ್ಲ ತಿಂಡಿ ತಿಂದಿದ್ದಾರೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನಲ್ಲಿರುವ ಎಂಟಿಅರ್ ಮತ್ತು ಜನಾರ್ಧನ ಹೋಟೆಲ್‌ಗಳಿಗೂ ಸಿದ್ದರಾಮಯ್ಯ ಆಗಾಗ ಹೋಗುತ್ತಿರುತ್ತಾರೆ. ಅಲ್ಲೂ ಇಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಮೈಲಾರಿ ಹೋಟೆಲ್‌ನ ಜನಪ್ರಿಯತೆ ಕಂಡು ಬೇರೆಯವರೂ ತಮ್ಮ ಹೋಟೆಲ್‌ಗಳಿಗೆ ಅದೇ ಹೆಸರು ಇಡಲಾರಂಭಿಸಿರುವುದರಿಂದ ಇದರ ಮಾಲೀಕರು, ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್ ಅಂತ ಬೋರ್ಡ್ ಹಾಕಿಕೊಂಡಿದ್ದಾರೆ.