ಚಾಮರಾಜನಗರ: ಚಾಮರಾಜನಗರ ಯೂತ್ ಫಾರ್ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸೇವಾ ಸಂಭ್ರಮ 24 ಕಾರ್ಯಕ್ರಮವು ಸೇವಾ ಭಾರತಿ ಕಾಲೇಜು ಸಭಾಂಗಣದಲ್ಲಿ 26ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಉದ್ಘಾಟನೆಯನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ಋಗ್ವೇದಿ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ರೋಟರಿ ಸೆಲ್ಫ್ ಸಿಟಿ ಅಧ್ಯಕ್ಷರಾದ ಅಕ್ಷಯ್ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರಾದ ಪೂಜಾ ಸುಭಾಷ್, ಸಂಜೀವಿನಿ ಟ್ರಸ್ಟಿನ ಕಾರ್ಯದರ್ಶಿ ಸತೀಶ್ ಕುಮಾರ್ ,ಯೂಥ್ ಫಾರ್ ಸೇವಾ ಸಂಸ್ಥೆಯ ವಿಷ್ಣು ಪಿ ಹಾಗೂ ದೀಪಕ್ ಆರಾಧ್ಯರವರು ಆಗಮಿಸಲಿದ್ದಾರೆ.
