ಬೆಂಗಳೂರು: ಬಿಜೆಪಿ ಕೇಳಿದ ಕೂಡಲೇ ರಾಜೀನಾಮೆ ನೀಡಲು ಆಗುವುದಿಲ್ಲ ಎಂದು ಸಚಿವ ನಾಗೇಂದ್ರ ಪರ ಸಂಸದ ಡಿಕೆ ಸುರೇಶ್ ಬ್ಯಾಟಿಂಗ್ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ಅಕ್ರಮದ ಪ್ರಕರಣವನ್ನ ಸಿಬಿಐಗೆ ಕೊಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಪೊಲೀಸ್ ಸಮರ್ಥವಾಗಿದೆ. ಕರ್ನಾಟಕ ಪೊಲೀಸ್ ಎಲ್ಲಾ ನಿಭಾಯಿಸುತ್ತದೆ. ಸಿಬಿಐ ಕೊಡಿ ಅನ್ನೋದು ಬಿಟ್ಟು ಬಿಜೆಪಿ ಬೇರೆ ಏನು ಇಲ್ಲ. ಸಿಬಿಐ ಮುಖ್ಯಸ್ಥರು ನಮ್ಮ ರಾಜ್ಯದವರೇ. ಕೇಂದ್ರದಲ್ಲಿ ಬಿಜೆಪಿ ಇದೆ. ನಮಗೆ ಅನುಕೂಲ ಆಗಲಿದೆ ಅಂತ ಕೇಳ್ತಾರೆ ಅಂತ ಆರೋಪ ಮಾಡಿದರು.



