ಮಂಡ್ಯ: ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನಲೆ ಶ್ರೀರಂಗಪಟ್ಟಣದಲ್ಲಿರುವ ಕರಿಘಟ್ಟದ ಬೆಟ್ಟದ ಹಸೀರೀಕಕರಣಕ್ಕೆ ಪರಿಸರ ಪ್ರೇಮಿ ರಮೇಶ್ ಮುಂದಾಗಿದ್ದಾರೆ.
ಸ್ನೇಹಿತರ,ಗಣ್ಯರ ಮತ್ತು ಸಂಬಂಧಿಕರ ಹುಟ್ಟು ಹಬ್ಬಕ್ಕೆ ಬೆಟ್ಟದಲ್ಲಿ ಗಿಡ ನೆಡಸಿ ಪೋಷಣೆ ಮಾಡುತ್ತಿದ್ದಾರೆ.
ತಮಗೆ ಆತ್ಮೀಯರಾಗಿರುವವರನ್ನು ಬೆಟ್ಟಕ್ಕೆ ಕರೆ ತಂದು ಗಿಡ ನೆಡಿಸಿ ಸ್ವತಃ ನೀರು ಗೊಬ್ಬರ ಹಾಕಿ ಪೋಷಣೆ ಮಾಡುತ್ತಿದ್ದಾರೆ.
ಇವರ ಈ ವಿಶಿಷ್ಟ ಕೆಲಸದಿಂದಾಗಿ ಇಂದು ಕರಿಘಟ್ಟ ಬೆಟ್ಟದಲ್ಲಿ ತಪ್ಪಲು ಹಸಿರಿನಿಂದ ಕಂಗೊಳಿಸುವಂತಾಗಿದೆ.
ರಮೇಶ್ ವೃತ್ತಿಯಲ್ಲಿ ಫಿಲ್ಟರ್ ನೀರು ಸರಬರಾಜು ಮಾಡುತ್ತಿದ್ದು, ಪರಿಸರ ಸಂರಕ್ಷಣೆ ಕಾಯಕ ಮಾಡಿಕೊಂಡಿದ್ದಾರೆ.
ಇವರ ಈ ಸೇವೆಗೆ ತಾಲೂಕಿನ ಜನರೇ ಇವರಿಗೆ ಪರಿಸರ ಪ್ರೇಮಿ ರಮೇಶ್ ಎಂದು ಬಿರುದು ನೀಡಿ ಸೇವೆಗೆ ಪ್ರೋತ್ಸಾಹ ನೀಡಲಾಗಿದೆ.
ಪರಿಸರ ಪ್ರೇಮಿಯ ಈ ಪರಿಸರ ಕಳಕಳಿ ಕಾಳಜಿಗೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.