ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳಾದ ಪೃಥು ಪಿ ಅದ್ವೈತ್ ಹಾಗೂ ವೆಂಕಟರಾಘವ ಶಾಲೆಗೆ ಹೋಗುವ ಮೊದಲು ಶ್ರೀರಾಂಪುರ – ಗೊರೂರು ರಸ್ತೆಯಲ್ಲಿ ಗಿಡವನ್ನು ನೆಟ್ಟು ಶಾಲೆಗೆ ತೆರಳಿದರು.
ಈ ಸಂದರ್ಭದಲ್ಲಿ ಪೃಥು ಪಿ ಅದ್ವೈತ್ ಮಾತನಾಡಿ, ನಮಗೆ ಗಿಡ ನೆಡಲು ಶಾಲೆಯೇ ಸ್ಪೂರ್ತಿ ನಮ್ಮ ಹುಟ್ಟು ಹಬ್ಬದ ದಿನದಂದು ಶಾಲೆ ನಮಗೆ ಗಿಡವನ್ನು ಉಡುಗೊರೆ ಯಾಗಿ ನೀಡುತ್ತದೆ ಆ ಗಿಡವನ್ನು ನಾವು ನೆಟ್ಟು ಪೋಷಿಸುತ್ತೇವೆ. ಸತತ 5 ವರ್ಷಗಳಿಂದ ಗಿಡ ನೆಡುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ಪ್ರತಿ ವರ್ಷ ನನ್ನ ಹುಟ್ಟು ಹಬ್ಬದ ದಿನ ನನಗೆ ಎಷ್ಟು ವರ್ಷವೋ ಅಷ್ಟು ಗಿಡ ನೆಡುತ್ತೇನೆ. ನನ್ನೊಂದಿಗೆ ನನ್ನ ಸ್ನೇಹಿತರು ಹಾಗೂ ಪೋಷಕರು ಕೈ ಕೊಡಿಸುತ್ತಾರೆ. ಪೂರ್ಣ ಚೇತನ ಶಾಲೆಯಲ್ಲಿ ಗಿಡ ನೆಡುವ ಅಭ್ಯಾಸ ಆರಂಭಿಸಿದ್ದು ಈಗ ನನಗೆ ಹವ್ಯಾಸವಾಗಿದೆ ಎಂದು ತಿಳಿಸಿದರು.