Sunday, May 25, 2025
Google search engine

Homeರಾಜ್ಯಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲು: ಊಟ, ತಿಂಡಿ ಬಿಟ್ಟ ಅಭಿಮಾನಿ

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲು: ಊಟ, ತಿಂಡಿ ಬಿಟ್ಟ ಅಭಿಮಾನಿ

ಮಂಡ್ಯ: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲು ಹಿನ್ನೆಲೆ ನೆಚ್ಚಿನ ನಟನ ಸಂಕಷ್ಟ  ನೋಡಿ ದರ್ಶನ್ ಅಭಿಮಾನಿ ಊಟ ತಿಂಡಿ ಬಿಟ್ಟಿದ್ದಾರೆ.

ನೆಚ್ಚಿನ ನಟ ಬಿಡುಗಡೆಗಾಗಿ ಮನೆಯಲ್ಲಿ ದೇವರ ಮನೆ ಮುಂದೆ ಕುಳಿತು ಶ್ರೀರಂಗಪಟ್ಟಣದ ಗಂಜಾಮ್ ನ ವಿಕಲಚೇತನ ಯುವಕ ಪ್ರಜ್ವಲ್ ಪ್ರಾರ್ಥನೆ ಮಾಡುತ್ತಿದ್ದಾನೆ.

ಹುಚ್ಚು ಅಭಿಮಾನದಿಂದಾಗಿ ಕಳೆದರಡು ದಿನಗಳಿಂದ ಸರಿಯಾಗಿ ಊಟ ತಿಂಡಿ ಮಾಡದೆ ಮನೆಯಲ್ಲಿ ಸಪ್ಪಗೆ ಕುಳಿತಿದ್ದಾನೆ.

ಈತನಿಗೆ ನಡೆಯಲು ಮತ್ತು ಸರಿಯಾಗಿ ಮಾತು ಕೂಡ ಆಡಲು ಆಗದ  ವಿಕಲಚೇತನ ಯುವಕ ದರ್ಶನ್ ಅಭಿಮಾನಿಯಾಗಿದ್ದಾನೆ. ನಟ ದರ್ಶನ್ ಫೋಟೋ ಇರುವ ಬಟ್ಟೆ ಧರಿಸುವಷ್ಟು ಹುಚ್ಚು ಅಭಿಮಾನ ಈತನಿಗಿದೆ.

ಮನೆಯಲ್ಲಿ ತಮ್ಮ ಮಗನ ಸಂಕಷ್ಟ ನೋಡಲಾಗದೆ ತಂದೆ ತಾಯಿ‌ ಕಣ್ಣೀರು ಹಾಕುತ್ತಿದ್ದು, ದರ್ಶನ್ ಗೆ ಏನು ಆಗುವುದಿಲ್ಲ ಎಂದು ಪೋಷಕರಿಂದ ಮಗನಿಗೆ ಸಾಂತ್ವನ ಹೇಳುತ್ತಿದ್ದಾರೆ.

ಈ ಹಿಂದೆ ನೆಚ್ಚಿನ ದರ್ಶನ್ ನೋಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ  ವ್ಯಕ್ತಪಡಿಸಿದ್ದ. ಈ ಯುವಕನ ಹುಚ್ಚು ಅಭಿಮಾನ ತಿಳಿದು ದರ್ಶನ್ ಒಂದು ದಿನ‌ ಮನೆಗೆ ಬರುವ ಬಗ್ಗೆ ಭರವಸೆ ನೀಡಿದ್ದರು. ಅಂದಿನಿಂದ ದರ್ಶನ್ ಬರುವಿಕೆಗೆ ಕಾಯುತ್ತಿದ್ದ ಅಭಿಮಾನಿಗೆ ದರ್ಶನ್ ಜೈಲು ಪಾಲಾದ ವಿಷಯ ಶಾಕ್ ನೀಡಿದೆ.

RELATED ARTICLES
- Advertisment -
Google search engine

Most Popular