ಮಂಗಳೂರು (ದಕ್ಷಿಣ ಕನ್ನಡ): 2024-25ನೇ ಸಾಲಿನ ಎಸ್.ಕೆ.ಎಸ್.ಬಿ.ವಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನೂರುಲ್ ಹುದಾ ಮದ್ರಸಾ ಕುಂಜತ್ಕಲದಲ್ಲಿ ನಡೆಯಿತು.
ಮದ್ರಸಾದ ಸಹ ಅಧ್ಯಾಪಕ ಅಬೂಬಕ್ಕರ್ ಮದನಿ ಗಡಿಯಾರ ಪ್ರಾರ್ಥನೆ ಮಾಡಿ ಸಂದೇಶ ಭಾಷಣ ಮಾಡಿದರು.

ಸಹ ಅಧ್ಯಾಪಕ ಸಿದ್ದೀಕ್ ಹನೀಫಿ ಕೊಡಪದವು ಸಂದೇಶ ಭಾಷಣ ಮಾಡಿದರು. ಸದರ್ ಉಸ್ತಾದ್, ಮಸೀದಿ ಇಮಾಮ್ ಇರ್ಫಾನ್ ದಾರಿಮಿ ಗೇರುಕಟ್ಟೆ ಆಶೀರ್ವಚನ ನೀಡಿದರು. ಇದೇ ವೇಳೆ ನೂತನ ಸಮಿತಿಯನ್ನು ರಚಿಸಲಾಯಿತು.
ಎಸ್.ಕೆ.ಎಸ್.ಬಿ.ವಿ.ಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶಾನ್, ಪ್ರಧಾನ ಕಾರ್ಯದರ್ಶಿಯಾಗಿ ಹಾಶಿಂ ಹುಸೈನ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಮುಅದ್, ಖಜಾಂಜಿಯಾಗಿ ಮುಹಮ್ಮದ್ ಹಸನ್ ಫಾಝ್ ಇವರನ್ನು ಆಯ್ಕೆ ಮಾಡಲಾಯಿತು.