ಮಂಡ್ಯ: ಇಂದು ರಾಜ್ಯಾದ್ಯಂತ ಕೋಟಿ ಸಿನಿಮಾ ಬಿಡುಗಡೆ ಹಿನ್ನಲೆ ಸಕ್ಕರೆನಾಡು ಮಂಡ್ಯದಲ್ಲಿ ಕೋಟಿ ಸಿನಿಮಾ ಸಂಭ್ರಮಾಚರಣೆ ನಡೆಸಲಾಗಿದೆ.
ನಟ ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾ ಮಂಡ್ಯದ ಗುರು ಶ್ರೀ ಚಿತ್ರಮಂದಿರದಲ್ಲಿ ತೆರೆಕಂಡಿದೆ.
ಧನಂಜಯ್ ಅಭಿಮಾನಿಗಳು, ಮಂಡ್ಯದ ಶಕ್ತಿ ದೇವತೆ ಕಾಳೀಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಕಾಳೀಕಾಂಬ ದೇವಸ್ಥಾನದಿಂದ ಗುರು ಶ್ರೀ ಚಿತ್ರಮಂದಿರದವರೆಗೆ ನೂರಾರು ಆಟೋಗಳಿಂದ ರ್ಯಾಲಿ ನಡೆಸಿದ್ದಾರೆ. ನೆಚ್ಚಿನ ನಟ ಡಾಲಿ ಧನಂಜಯ್ ಭಾವಚಿತ್ರದ ಕಟ್ಟಿ ಮೆರವಣಿಗೆ ಮಾಡಿದ್ದಾರೆ.

ಬಳಿಕ ಅಭಿಮಾನಿಗಳು ಚಿತ್ರಮಂದಿರದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕೋಟಿ ಸಿನಿಮಾ ಶತದಿನೋತ್ಸವ ಆಚರಿಸಲಿ. ನಟ ಡಾಲಿ ಧನಂಜಯ್ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಅವರು ಚಿತ್ರರಂಗದಲ್ಲಿ ಹೆಚ್ಚು ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಶುಭಕೋರಿದರು.