Thursday, May 29, 2025
Google search engine

Homeಅಪರಾಧಕಾನೂನುಹೊಸ ಕ್ರಿಮಿನಲ್ ಕಾನೂನುಗಳ ಜಾರಿ ತಡೆಗೆ ಆಗ್ರಹ: ದೇಶದ ಪ್ರಮುಖ ನಾಯಕರಿಗೆ ೩,೬೯೫ ಜನರ ಸಹಿ...

ಹೊಸ ಕ್ರಿಮಿನಲ್ ಕಾನೂನುಗಳ ಜಾರಿ ತಡೆಗೆ ಆಗ್ರಹ: ದೇಶದ ಪ್ರಮುಖ ನಾಯಕರಿಗೆ ೩,೬೯೫ ಜನರ ಸಹಿ ಪತ್ರ ರವಾನೆ

ನವದೆಹಲಿ: ನೂತನ ಕ್ರಿಮಿನಲ್ ಕಾನೂನುಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಕೂಡಲೇ ಮಧ್ಯಪ್ರವೇಶಿಸಿ, ಅವುಗಳ ಅನುಷ್ಠಾನವನ್ನು ತಡೆಯಬೇಕು’ ಎಂದು 3,895 ನಾಗರಿಕರು ಇಂಡಿಯಾ’ ಒಕ್ಕೂಟ ಹಾಗೂ ಎನ್‌ಡಿಎ ಅಂಗಪಕ್ಷಗಳ ಮುಖಂಡನ್ನು ಒತ್ತಾಯಿಸಿದ್ದಾರೆ.

ಈ ಬೇಡಿಕೆಯುಳ್ಳ ಮನವಿ ಪತ್ರವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಹಾಗೂ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ ಚೌಧರಿ ಅವರಿಗೆ ಬರೆಯಲಾಗಿದ್ದು, ಅದರ ಪ್ರತಿಗಳನ್ನು ವಿವಿಧ ಪಕ್ಷಗಳಿಗೆ ಕಳುಹಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ಪಕ್ಷಗಳ ಮುಖಂಡರಿಗೂ ಈ ಪತ್ರವನ್ನು ಕಳುಹಿಸಲಾಗಿದೆ. ತುಷಾರ್ ಗಾಂಧಿ, ತನಿಕಾ ಸರ್ಕಾರ್, ಹೆನ್ರಿ ಟಿಫಾಗ್ನೆ, ಮೇಜರ್ ಜನರಲ್ (ನಿವೃತ್ತ) ಸುಧೀರ್ ವೊಂಬತ್ಕೆರೆ, ತೀಸ್ತಾ ಸೆಟಲ್ವಾಡ್, ಕವಿತಾ ಶ್ರೀವಾಸ್ತವ ಹಾಗೂ ಶಬನಮ್ ಹಷ್ಮಿ ಈ ಪತ್ರಕ್ಕೆ ಸಹಿ ಹಾಕಿರುವ ಪ್ರಮುಖರು. ಈ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಸಂಸತ್‌ನಲ್ಲಿ ವಿಸ್ತೃತ ಚರ್ಚೆ ನಡೆಯಬೇಕು.

ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಹಾಗೂ ಕಾನೂನು ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ೨೦೨೩, ಭಾರತೀಯ ನ್ಯಾಯ ಸಂಹಿತಾ, ೨೦೨೩ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ, ೨೦೨೩ ಕುರಿತು ಈ ಪ್ರಮುಖರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ನೂತನ ಕಾನೂನುಗಳು ಜುಲೈ ೧ರಿಂದ ಜಾರಿಗೆ ಬರಲಿವೆ.

RELATED ARTICLES
- Advertisment -
Google search engine

Most Popular