Wednesday, May 21, 2025
Google search engine

Homeಅಪರಾಧಪರಾರಿಯಾಗಿದ್ದ ವಿದ್ಯಾರ್ಥಿನಿ ವಿವಾಹಿತ ಪುರುಷನೊಂದಿಗೆ ಶವವಾಗಿ ಪತ್ತೆ

ಪರಾರಿಯಾಗಿದ್ದ ವಿದ್ಯಾರ್ಥಿನಿ ವಿವಾಹಿತ ಪುರುಷನೊಂದಿಗೆ ಶವವಾಗಿ ಪತ್ತೆ

ತುಮಕೂರು: ತುಮಕೂರು ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವ ೨೦ ವರ್ಷದ ವಿದ್ಯಾರ್ಥಿನಿ ೪೦ ವರ್ಷದ ವಿವಾಹಿತ ಪುರುಷನನ್ನು ಪ್ರೀತಿಸಿ ಪರಾರಿ ಆಗಿದ್ದು, ಇಂದು ಇಬ್ಬರ ಶವ ಪತ್ತೆಯಾಗಿದೆ.

ಅನನ್ಯ (೧೯) ಹಾಗೂ ರಂಗಶಾಮಣ್ಣ (೪೦) ಮೃತರು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಇಬ್ಬರೂ ಪ್ರೇಮಿಗಳ ಶವಗಳು ಪತ್ತೆಯಾಗಿವೆ. ಮೃತ ವಿದ್ಯಾರ್ಥಿನಿ ಅನನ್ಯಾ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯ ಗ್ರಾಮದವಳಾಗಿದ್ದು, ತುಮಕೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಳು. ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ವಿವಾಹಿತ ಪುರುಷನಾಗಿದ್ದು, ಈತನಿಗೆ ಮಡದಿ ಮತ್ತು ಮಕ್ಕಳೂ ಇದ್ದಾರೆ.

ಅಕ್ಕಪಕ್ಕದ ಗ್ರಾಮಸ್ಥರಾದ ಇಬ್ಬರೂ ನಾಪತ್ತೆಯಾಗಿ ಮೂರು ದಿನಗಳಾದರೂ ಪತ್ತೆ ಆಗಿರಲಿಲ್ಲ. ಆಗ ಅವರ ಮೊಬೈಲ್ ಟ್ರೇಸ್ ಮಾಡಿದಾಗ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಮೊಬೈಲ್ ಟ್ರೇಸ್ ಆಗಿದೆ. ನಿನ್ನೆ ಮಾವತ್ತೂರು ಕೆರೆ ಬಳಿ ನಿಲ್ಲಿಸಿದ್ದ ರಂಗಶಾಮಣ್ಣನ ಕಾರಿನಲ್ಲಿ ಇಬ್ಬರ ಮೊಬೈಲ್‌ಗಳು, ಕೆರೆಯ ದಂಡೆಯಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿವೆ. ಆಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ ಪೊಲೀಸರು ನಿನ್ನೆ ಮಧ್ಯಾಹ್ನದಿಂದಲೇ ಅಗ್ನಿಶಾಮಕ ದಳದ ಸಹಾಯದಿಂದ ಶವ ಪತ್ತೆಗೆ ಮುಂದಾಗಿದ್ದರು.

ಶನಿವಾರ ತಡರಾತ್ರಿಯಾದ ಹಿನ್ನೆಲೆಯಲ್ಲಿ ಶವ ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಿ ಪುನಃ ಭಾನುವಾರ ಬೆಳಗ್ಗೆಯಿಂದ ಪುನಃ ಶವ ಹುಡುಕಾಟ ಕಾರ್ಯಾಚರಣೆ ಮುಂದುವರೆಸಿದ್ದರು. ಈ ವೇಳೆ ರಂಗಶಾಮಣ್ಣ ಹಾಗೂ ವಿದ್ಯಾರ್ಥಿನಿ ಅನನ್ಯಾ ಅವರ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಪೊಲೀಸರು ಇಬ್ಬರು ಪ್ರೇಮಿಗಳನ್ನು ಅವರ ಮನೆಯವರೇ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆಯಿಂದ ಮಾಹಿತಿ ಲಭ್ಯವಾಗಲಿದೆ.

RELATED ARTICLES
- Advertisment -
Google search engine

Most Popular