ಮಂಡ್ಯ: ಕಾವೇರಿ ಜಲಾನಯ ಪ್ರದೇಶದಲ್ಲಿ ಬಾರಿ ಮಳೆ ಹಿನ್ನಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಂ ಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ನೀರಿನ ಮಟ್ಟ 95 ಅಡಿಗೆ ಏರಿಕೆಯಾಗಿದೆ.
ಕೆಆರ್ ಎಸ್ ಡ್ಯಾಂ ಗೆ 9369 ಕ್ಯೂಸೆಕ್ ಒಳ ಹರಿವಿದ್ದು, ಹೊರ ಹರಿವು 518 ಕ್ಯೂಸೆಕ್ ಆಗಿದೆ. ಡ್ಯಾಂನ ಗರಿಷ್ಟ ಮಟ್ಟ 124.80 ಅಡಿ ಇದೆ. ಇಂದಿನ ಕ್ಯಾಪ್ 11.108 TMC ಇದೆ.
ನೀರಿನ ಮಟ್ಟ ಏರಿಕೆ ಜೊತೆಗೆ ಒಳ ಹರಿವಿನಲ್ಲಿ ಇಳಿತ ಕಂಡಿದೆ. ಕಳೆದ ವರ್ಷ ಇದೇ ದಿನ 78 ಅಡಿ ನೀರು ಸಂಗ್ರಹವಾಗಿತ್ತು.