Saturday, May 24, 2025
Google search engine

Homeಅಪರಾಧನಕಲಿ ಶೇರು ಟ್ರೇಡಿಂಗ್: ಮಂಗಳೂರಿನ ವ್ಯಕ್ತಿಗೆ 74 ಲಕ್ಷ ರೂ. ವಂಚನೆ

ನಕಲಿ ಶೇರು ಟ್ರೇಡಿಂಗ್: ಮಂಗಳೂರಿನ ವ್ಯಕ್ತಿಗೆ 74 ಲಕ್ಷ ರೂ. ವಂಚನೆ

ಮಂಗಳೂರು: ಇನ್‌ ಸ್ಟಾಗ್ರಾಂನಲ್ಲಿ ಜಾಹೀರಾತು ನೋಡಿ ಸ್ಟಾಕ್ ಮಾರ್ಕೆಟ್ ​​ನಲ್ಲಿ ಶೇರು ಟ್ರೇಡಿಂಗ್‌ ನಲ್ಲಿ ಹಣ ಹೂಡಿ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಮಾ.15ರಂದು ಇನ್‌ ಸ್ಟಾಗ್ರಾಂ ನೋಡುತ್ತಿದ್ದಾಗ ಅದರಲ್ಲಿ ಶೇರು ಟ್ರೇಡಿಂಗ್ ಜಾಹೀರಾತು ನೋಡಿದ್ದಾರೆ. ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಶೇರು ಟ್ರೇಡಿಂಗ್ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಲ್ಲಿದ್ದ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ವಾಟ್ಸಾಪ್​​​ ಲಿಂಕ್ ಬಂದಿದೆ. ಆ ಲಿಂಕ್‌ ಅನ್ನು ತೆರೆದು ನೋಡಿದಾಗ ಅದರಲ್ಲಿ ಗ್ರೂಪ್‌ನ ಲಿಂಕ್ ಕಂಡು ಬಂದಿದೆ.

ನಂತರ ದೂರುದಾರರನ್ನು ಸದರಿ ಗ್ರೂಪ್​​ಗೆ ಸೇರಿಸಿಕೊಂಡಿದ್ದಾರೆ. ಈ ಗ್ರೂಪ್​ನಲ್ಲಿ ಶೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿ ನೀಡಿದ್ದಾರೆ. ಏ.25 ರಂದು ಕಂಪನಿಯಿಂದ ಟ್ರೇಡಿಂಗ್ ಖಾತೆಯನ್ನು ತೆರೆಯಲು ವಾಟ್ಸಾಪ್​​​ ಮೂಲಕ ಮೆಸೇಜ್ ಬಂದಿದೆ. ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿ ಶೇರು ಟ್ರೇಡಿಂಗ್ ಬಗ್ಗೆ ಪ್ರೇರೇಪಿಸಿದ್ದಾರೆ.

ಲಾಭದ ಆಸೆ: ಮೊದಲಿಗೆ 10 ಸಾವಿರ ರೂ. ಹಣವನ್ನು ತೊಡಗಿಸಲು ತಿಳಿಸಿ ಇಂಡಸ್ ಇಂಡ್ ಬ್ಯಾಂಕ್ ಖಾತೆಯ ವಿವರವನ್ನು ಕಳುಹಿಸಿದ್ದಾರೆ. ಅದರಂತೆ ದೂರುದಾರರು ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ 10,000ರೂ. ಹಣವನ್ನು ಪಾವತಿಸಿದ್ದಾರೆ. ನಂತರ ಮಾ.15 ರಿಂದ ಜು.4ರ ವರೆಗೆ ದೂರವಾಣಿ ನಂಬರ್​​​​​ಗಳಿಂದ ವಾಟ್ಸಾಪ್ ಮೆಸೇಜ್ ಮೂಲಕ ಕಂಪನಿಯವರು ಎಂದು ಪರಿಚಯಿಸಿಕೊಂಡು ಶೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಲು ಹೇಳಿದ್ದರು.

ದೂರುದಾರರು ಹಂತ ಹಂತವಾಗಿ ಅಪರಿಚಿತ ವ್ಯಕ್ತಿ ನೀಡಿದ ನಾನಾ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಹಣವನ್ನು ಕಂಪನಿಯವರಿಗೆ ಫೋನ್ ಪೇ ಮೂಲಕ ಪಾವತಿಸಿರುತ್ತಾರೆ. ನಂತರ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದು, ಸಾಧ್ಯವಾಗದೇ ಇದ್ದುದರಿಂದ ಅನುಮಾನ ಬಂದು ತನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular