ಮಂಡ್ಯ: ಮಂಡ್ಯದಲ್ಲಿ ಎನ್ ಜಿಓ ಮುಖ್ಯಸ್ಥ ಕಾರುಬಾರು ನಡೆಸುತ್ತಿದ್ದು, ಭಾರತ ಸರ್ಕಾರದ ಹೆಸರು, ಲಾಂಛನ ದುರ್ಬಳಕೆ ಮಾಡಲಾಗುತ್ತಿದೆ.
ತನ್ನ ಸ್ವಂತ ಕಾರಿಗೆ ಭಾರತ ಸರ್ಕಾರ, GOVT OF INDIA, ಭಾರತ ಸರ್ಕಾರದ ಲಾಂಛನ, MINISTRY OF CONSUMER AFFAIRS ಎಂಬ ಬೋರ್ಡ್ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಯಂತೆ ಫೋಸು ಕೊಡುತ್ತಿದ್ದಾರೆ.
ಕಾನೂನುಬಾಹಿರವಾಗಿ ಭಾರತ ಸರ್ಕಾರದ ಲಾಂಛನ, MINISTRY OF CONSUMER AFFAIRS ಎಂಬ ಲೆಟರ್ ಹೆಡ್ ಬಳಕೆ ಮಾಡುತ್ತಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೆಸರು ದುರುಪಯೋಗ ಮಾಡಿಕೊಳ್ಳಲಾಗಿದೆ.
ಗ್ರಾಪಂ, ತಾಪಂ, ಜಿಪಂ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲೂ ಅನಧಿಕೃತ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿದ್ದು, ಸರ್ಕಾರಿ ಅಧಿಕಾರಿಯಂತೆ ಹಸಿರು ಪೆನ್ ಬಳಕೆ ಮಾಡಲಾಗಿದೆ.

ಗ್ರಾಪಂಗಳಿಗೆ ತೆರಳಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಸಿ.ಡಿ.ಕಿರಣ್, ನ್ಯಾಷನಲ್ ಜಾಯಿಂಟ್ ಸೆಕ್ರೆಟರಿ, Government of India, National Bharath Sevak Samaj / PFI MINISTRY OF CONSUMER AFFAIRS, NEW DELHI ಹೆಸರಿನ ಲೆಟರ್ ಹೆಡ್ ಬಳಸುತ್ತಿದ್ದು, ಪೊಲೀಸರು, RTO ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.