Tuesday, November 18, 2025
Google search engine

Homeರಾಜ್ಯಕೆಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿ: ಜು.29 ರಂದು ಸಿ.ಎಂ. ಬಾಗೀನ ಅರ್ಪಣೆ

ಕೆಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿ: ಜು.29 ರಂದು ಸಿ.ಎಂ. ಬಾಗೀನ ಅರ್ಪಣೆ

ಮಂಡ್ಯ: ಕೆಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. 124 ಅಡಿಗೆ ಕೆಆರ್ ಎಸ್ ನೀರಿನ ಮಟ್ಟ ಏರಿಕೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಒಳ, ಹೊರ ಹರಿವಿನ ಪ್ರಮಾಣ ಕ್ಷೀಣಿಸಿದೆ. ನಿನ್ನೆ 40 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಇಂದು 31 ಸಾವಿರ ಕ್ಯೂಸೆಕ್ ಗೆ ತಗ್ಗಿದೆ. ಹೊರ ಹರಿವಿನ ಪ್ರಮಾಣವು ಕ್ಷೀಣವಾಗಿದ್ದು, 50 ಸಾವಿರದಿಂದ 11 ಸಾವಿರಕ್ಕೆ ಇಳಿಕೆಯಾಗಿದೆ.

ಜು.29 ರಂದು ಕೆ.ಆರ್.ಎಸ್ ಜಲಾಶಯಕ್ಕೆ ಸಿ.ಎಂ. ಬಾಗೀನ

ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನಲೆ ಜು.29 ರಂದು ಕೆ.ಆರ್.ಎಸ್ ಜಲಾಶಯಕ್ಕೆ ಸಿ.ಎಂ. ಬಾಗೀನ ಅರ್ಪಿಸಲಿದ್ದಾರೆ.

ಕಾ.ನೀ.ನಿಗಮದ ಅಧಿಕಾರಿಗಳು ಡ್ಯಾಂನಲ್ಲಿ 124.10 ಅಡಿ ಭರ್ತಿ ಕಾಯ್ದಿರಿಸಿದ್ದಾರೆ.

ಈ ಹಿಂದೆ ಜು-27 ಕ್ಕೆ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಎರಡು ದಿನ ಮುಂದಕ್ಕೆ ಕಾರ್ಯಕ್ರಮ ಆಯೋಜನೆ‌ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ, ಸೇರಿದಂತೆ  ಸಚಿವ ಸಂಪುಟದ ಹಲವು ಸಚಿವರು ಸೇರಿ ಉನ್ನತ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಕ್ಷೇತ್ರದ ಶಾಸಕ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

ಪ್ರವಾಹ ಇಳಿಮುಖ: ಮೀನು ಶಿಕಾರಿಗೆ ಮುಂದಾದ ಜನರು

ಹೆಚ್ಚಿನ ನೀರು ಬಿಡುಗಡೆಯಿಂದಾಗಿ ಡ್ಯಾಂ ಕೆಳಗಿನ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ  ಉಂಟಾಗಿತ್ತು. ಪ್ರವಾಹ ಇಳಿಮುಖದಿಂದ ನದಿ ಪಾತ್ರ ಜನರಲ್ಲಿ ಆತಂಕ ಕಡಿಮೆಯಾಗಿದೆ.

ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖ ಹಿನ್ನಲೆ ಕಾವೇರಿ ನದಿಯಲ್ಲಿ ಮೀನು ಶಿಕಾರಿಗೆ ಜನರು ಮುಂದಾಗಿದ್ದಾರೆ.

ನದಿ ತಟದಲ್ಲಿ ಕುಳಿತು, ಸೇತುವೆಗಳ ಮೇಲಿಂದ ಗಾಳ ಹಾಕಿ ಮೀನು ಶಿಕಾರಿ ಮಾಡುತ್ತಿದ್ದಾರೆ.‌ ಕೆಲ ವೃತ್ತಿ ನಿರತ ಮೀನುಗಾರರು ನದಿಯಲ್ಲಿ ತೆಪ್ಪ ಬಳಸಿ ಮೀನು ಶಿಕಾರಿಗೆ ಕೈ ಹಾಕಿದ್ದಾರೆ. ಪ್ರವಾಹ ಬಂದ ಸಂಧರ್ಭದಲ್ಲಿ ಹೆಚ್ಚು ಮೀನುಗಳು ಸಿಗುವ ಕಾರಣಕ್ಕೆ ಎಲ್ಲೆಡೆ ಮೀನು ಶಿಕಾರಿ ಮಾಡುವುದು ಕಂಡುಬರುತ್ತಿದೆ.

KRS ಡ್ಯಾಂನ ಇಂದಿನ ನೀರಿನ‌ ಮಟ್ಟ.

ಗರಿಷ್ಠ ಮಟ್ಟ 124.80 ಅಡಿ.

ಇಂದಿನ ಮಟ್ಟ 124.10 ಅಡಿ.

ಗರಿಷ್ಠ ಸಾಂದ್ರತೆ 49.453 ಟಿ.ಎಂ.ಸಿ.

ಇಂದಿನ ಸಾಂದ್ರತೆ 48.475 ಟಿಎಂಸಿ.

ಒಳ ಹರಿವು 31,852 ಕ್ಯೂಸೆಕ್.

ಹೊರ ಹರಿವು 11,911 ಕ್ಯೂಸೆಕ್.

RELATED ARTICLES
- Advertisment -
Google search engine

Most Popular