Monday, July 7, 2025
Google search engine

Homeರಾಜ್ಯರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ನಟ ವಿನೋದ್ ರಾಜ್

ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ನಟ ವಿನೋದ್ ರಾಜ್

ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಗೀಡಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕುಟುಂಬಸ್ಮರನ್ನು ಇಂದು ಭೇಟಿಯಾಗಿರುವ ನಟ ವಿನೋದ್ ರಾಜ್ ರೇಣುಕಾಸ್ವಾಮಿ ಕುಟುಂಬಕ್ಕೆ ೧ ಲಕ್ಷ ರೂ. ಹಣ ಸಹಾಯ ಮಾಡಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ವಿನೋದ್ ರಾಜ್ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ನಟ ದರ್ಶನ್ ರನ್ನು ಭೇಟಿ ಮಾಡಿ ಬಂದಿದ್ದರು. ಬಳಿಕ ನೆಟ್ಟಿಗರು ಮೊದಲು ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ ಎಂದು ನೆಟ್ಟಿಗರು ಆಗ್ರಹಿಸಿದ್ದರು. ಅದರಂತೆ ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿರುವ ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯಧನ ನೀಡಿದ್ದಾರೆ.

ಚಿತ್ರದುರ್ಗ ನಗರಕ್ಕೆ ಆಗಮಿಸಿ ರೇಣುಕಾಸ್ವಾಮಿ ಪೋಷಕರು, ಪತ್ನಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಟ ವಿನೋದ್ ರಾಜ್ ೧ ಲಕ್ಷ ರೂ. ಹಣವನ್ನೂ ಸಹಾಯದ ರೂಪದಲ್ಲಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular