ತಾಂಡವಪುರ : ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ 227 ನೇ ಜಯಂತೋತ್ಸವವನ್ನು ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ಗ್ರಾಮಸ್ಥರು ಆಚರಿಸಿದರು.
ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕರ ಸಂಘ ಹಾಗೂ ಗ್ರಾಮದ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಈ ಜಯಂತೋತ್ಸವವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೆಎಸ್ ರವಿ ಅವರು ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು ಇದೇ ವೇಳೆ ಮಾತನಾಡಿದ ಬೀರಯ್ಯನವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರು ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವೀರ ಮರಣ ಹೊಂದಿದ್ದಾರೆ ಅವರ ಆದರ್ಶ ಮತ್ತು ತತ್ವಗಳು ನಮಗೆ ದಾರಿದೀಪವಾಗಿದ್ದು ಅವರ ಜಯಂತೋತ್ಸವವನ್ನು ಇಂದು ನಮ್ಮ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಎಸ್ ರವಿ ಸದಸ್ಯರಾದ ನಂಜಯ್ಯ ಗ್ರಾಮ ಪಂಚಾಯಿತಿ ಸದಸ್ಯೆ, ಶೃತಿ ಬೀರಯ್ಯ ಗಾಯಿತ್ರಿ ಮಾದೇವ ಚಿನ್ನುರಮ್ಮ ಜೆ ಆನಂದ ನಂಜುಂಡ ಡೈರಿ ಮಹೇಶ ಸಿದ್ದು ಮತ್ತು ಸಂಗೊಳ್ಳಿ ರಾಯಣ್ಣ ಯುವಕರ ಬಳಗದ ಸದಸ್ಯರು ಗ್ರಾಮಸ್ಥರು ಸೇರಿ ಸಂಗೊಳ್ಳಿ ರಾಯಣ್ಣನವರ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿಸಿ ಪೂಜಿಸಿ ಗೌರವಿಸಲಾಯಿತು