ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರ ಮೇಲೂ ದರ ಏರಿಸಿದ್ದಾಯಿತು. ಇನ್ನು ಗಾಳಿಯ ಮೇಲೂ ಒಂದು ತೆರಿಗೆ ಹಾಕಿಬಿಟ್ಟರೆ ಔರಂಗಜೇಬನ ಅಪ್ಪಂದಿರು ಎನ್ನುವುದನ್ನು ತೋರಿಸಲು ಇನ್ನೇನೂ ಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಜಲ ಮಂಡಳಿ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಕ್ಕೆ ಬಂದ ಕೂಡಲೇ ಮದ್ಯದ ಬೆಲೆ ನಂತರ ಸ್ಟಾಂಪ್ ಡ್ಯೂಟಿ, ವಿದ್ಯುತ್ ಬಿಲ್ ಎಲ್ಲಾ ಹೆಚ್ಚಿಸಿದರು. ಈಗ ನೀರಿನ ದರವೂ ಹೆಚ್ಚಿಸಿದ್ದಾರೆ. ಈಗ ಉಳಿದಿರುವುದು ಗಾಳಿಯ ಮೇಲೆ ಟ್ಯಾಕ್ಸ್ ಹಾಕುವುದು ಮಾತ್ರ ಎಂದು ಹೇಳಿದರು.
ಯಾರೇ ಜನವಿರೋಧಿ ಆಡಳಿತ ನಡೆಸಿದರೂ ಆ ಸರ್ಕಾರಕ್ಕೆ ಆಯಸ್ಸು ಕಡಿಮೆ. ಅದನ್ನು ಜನರು ತೀರ್ಮಾನ ಮಾಡಿಬಿಡುತ್ತಾರೆ. ಮುಂದೆ ಬನ್ನಿ ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಜನ ಹೇಳುತ್ತಿದ್ದಾರೆ. ಒಂದು ಕಡೆ ಗ್ಯಾರಂಟಿ ಕೊಟ್ಟು ಮತ್ತೊಂದು ಕಡೆ ಪಿಕ್ ಪ್ಯಾಕೇಟ್ ಮಾಡಲಾಗುತ್ತಿದೆ. ೨ ಸಾವಿರ ಕೊಟ್ಟು ೨೦ ಸಾವಿರ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಶ್ನೆ ಮಾಡುವವರಿಗೆ, ಸಮರ್ಥನೆ ಮಾಡಿಕೊಳ್ಳುವವರಿಗೆ ಅದಕ್ಕಿಂತ ದೊಡ್ಡ ವೇದಿಕೆ ಮತ್ತೊಂದಿರಲಿಲ್ಲ. ಎಲ್ಲರೂ ಮಾತನಾಡಿದ್ದೂ ದಾಖಲೆಗೆ ಹೋಗುತ್ತಿತ್ತು. ಈ ಎಲ್ಲಾ ಸತ್ಯ ಹೊರಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಅದಕ್ಕೆ ಅವಕಾಶವನ್ನೇ ಸಿಎಂ ಕೊಡಲಿಲ್ಲ ಎಂದು ದೂರಿದರು. ಸಿದ್ದರಾಮಯ್ಯ ತಮ್ಮ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ ಎನ್ನುತ್ತಾರೆ. ಆದರೆ ಆರ್‌ಟಿಇ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ವಿರುದ್ಧ ೫೦ ಲೋಕಾಯುಕ್ತ ಕೇಸುಗಳು ಇರುವುದಾಗಿ ಉತ್ತರ ಸಿಕ್ಕಿದೆ ಎಂದರು.