ಉತ್ತರ ಕನ್ನಡ: ಜಿಲ್ಲೆಯ ಶಿರೂರು ಬಳಿಯ ಹೆದ್ದಾರಿ ೬೬ರಲ್ಲಿ ಬೆಟ್ಟ ಕುಸಿತ ಉಂಟಾಗಿ, ಕೇರಳ ಮೂಲದ ಅರ್ಜುನ್ ಎಂಬುವರ ಲಾರಿ ನಾಪತ್ತೆಯಾಗಿತ್ತು. ಇಂದು ಶನಿವಾರ ಲಾರಿಯು ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡ ಕುಸಿತಗೊಂಡು ೧೦ ಮಂದಿ ನಾಪತ್ತೆಯಾಗಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಕೇರಳ ಮೂಲಕ ಅರ್ಜುನ್ ಎಂಬುವರಿಗೆ ಸೇರಿದಂತ ಲಾರಿ ಕೂಡ ನಾಪತ್ತೆಯಾಗಿತ್ತು.
ಇಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಗಂಗಾವಳಿ ನದಿಯಲ್ಲಿ ಮುಳುಗಿದ್ದಂತ ಕೇರಳ ಮೂಲದ ಅರ್ಜುನ್ ಎಂಬುವರಿಗೆ ಸೇರಿದಂತೆ ಲಾರಿಯನ್ನು ಪತ್ತೆ ಹಚ್ಚಲಾಗಿದೆ. ಇದೀಗ ಲಾರಿಗೆ ಹಗ್ಗವನ್ನು ಕಟ್ಟಿ, ಮೇಲೆ ಎಳೆಯುವಂತ ಕಾರ್ಯಾಚರಣೆ ನಡೆಯುತ್ತಿದೆ.