Wednesday, May 21, 2025
Google search engine

Homeಅಪರಾಧಮಂಡ್ಯ: ಮೈಕ್ರೋ ಫೈನಾನ್ಸ್ ಗಳಲ್ಲಿ ಅಮಾಯಕರ ಹೆಸರಿನಲ್ಲಿ ಸಾಲ: ತಾಯಿ-ಮಗಳಿಂದ 1 ಕೋಟಿ ರೂ. ವಂಚನೆ

ಮಂಡ್ಯ: ಮೈಕ್ರೋ ಫೈನಾನ್ಸ್ ಗಳಲ್ಲಿ ಅಮಾಯಕರ ಹೆಸರಿನಲ್ಲಿ ಸಾಲ: ತಾಯಿ-ಮಗಳಿಂದ 1 ಕೋಟಿ ರೂ. ವಂಚನೆ

ಮಂಡ್ಯ: ಮೈಕ್ರೋ ಫೈನಾನ್ಸ್‌ಗಳ ಮೂಲಕ ಅಮಾಯಕ ಮಹಿಳೆಯರ ಹೆಸರಿನಲ್ಲಿ ೧ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಪಡೆದು ತಾಯಿ-ಮಗಳಿಬ್ಬರು ಹಲವು ಕುಟುಂಬಗಳ ಗಳನ್ನೂ ವಂಚಿಸಿರುವ ಘಟನೆ ಮಂಡ್ಯನಗರ ಹೊಸಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯನಗರದ ಗಾಂಧಿನಗರ ೫ನೇ ತಿರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾಯಿ ವಿಜಯಮ್ಮ ಆಕೆಯ ಮಗಳು ದಿವ್ಯ ಹಲವು ಅಮಾಯಕರ ಹೆಸರಿನಲ್ಲಿ ಕೋಟಿ ರೂ. ಗೂ ಹೆಚ್ಚು ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿದ್ದಾರೆ.

ಈಗ ತಮ್ಮ ಹೆಸರಿನಲ್ಲಿ ಸಾಲ ತೆಗೆದುಕೊಟ್ಟಿರುವ ಮಹಿಳೆಯರು, ಸಾಲದ ಕಂತುಗಳನ್ನು ಕಟ್ಟಿ ತೀರಿಸುವ ಅನಿವಾರ್ಯತೆ ಎದುರಾಗಿದ್ದು, ಈ ಇಬ್ಬರು ಮಹಿಳೆಯರ ಮೇಲೆ ಆಕ್ರೋಶ ಹೊರ ಹಾಕಿ, ಹೊಸಹಳ್ಳಿ ವೃತ್ತದಲ್ಲಿ ವಂಚಕ ತಾಯಿ, ಮಗಳ ಭಾವಚಿತ್ರವಿರುವ ಪ್ಲೇಕ್ಸ್ ಅನ್ನು ಅಳವಡಿಸಿ, ನಾವು ಸಾಲದ ಕಂತುಗಳನ್ನು ಕಟ್ಟುವುದಿಲ್ಲ, ಈ ವಂಚನೆಯಲ್ಲಿ ಮೈಕ್ರೋ ಪೈನಾನ್ಸ್ ಕಂಪನಿಯ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಅವರೆಲ್ಲ ಸೇರಿ ನಮ್ಮನ್ನು ವಂಚಿಸಿದ್ದಾರೆ. ಹಾಗಾಗಿ ಈ ಇಬ್ಬರು ವಂಚಕಿಯರನ್ನು ಹಿಡಿದು ತರುವವರೆಗೂ ಸಾಲದ ಕಂತುಗಳನ್ನು ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

RELATED ARTICLES
- Advertisment -
Google search engine

Most Popular