Tuesday, May 20, 2025
Google search engine

Homeರಾಜ್ಯಸುದ್ದಿಜಾಲರೇಖಾ ಶ್ರೀನಿವಾಸ್ ಅವರಿಗೆ ತಿಮ್ಮಕ್ಕ ನ್ಯಾಷನಲ್ ಗ್ರೀನ್ ರಿ ಅವಾರ್ಡ್ ಪ್ರಶಸ್ತಿ

ರೇಖಾ ಶ್ರೀನಿವಾಸ್ ಅವರಿಗೆ ತಿಮ್ಮಕ್ಕ ನ್ಯಾಷನಲ್ ಗ್ರೀನ್ ರಿ ಅವಾರ್ಡ್ ಪ್ರಶಸ್ತಿ

ಮೈಸೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಿತಿ ವತಿಯಿಂದ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ವೃಕ್ಷ ಮಾತೆ ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ರವರ 113ನೇ ಜನ್ಮದಿನದ ಸಂಭ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಕುವೆಂಪು ನಗರದ ನಿವಾಸಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ಅಧ್ಯಕ್ಷರಾದ ಉಮೇಶ್ (ಸಾಲುಮರದ ತಿಮ್ಮಕ್ಕನ ದತ್ತು ಪುತ್ರ), ಪ್ರಧಾನ ಕಾರ್ಯದರ್ಶಿ ಎಲ್, ಪಿ.ಪ್ರಭಾಕರ್, ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಿತಿ ಅಧ್ಯಕ್ಷ ರಾದ ಡಾ. ಹೇಮಂತ್ ಗೌಡ, ಶ್ರೀ ಸಿದ್ದಾರ್ಥ ಎಜುಕೇಷನ್‌ ಸೊಸೈಟಿ ಸದಸ್ಯರಾದ ಪ್ರಭುವನ್, ಮನೋಜ್, ಅಭಿಶೇಕ್ ಮತ್ತಿತರು ಇದ್ದರು.

RELATED ARTICLES
- Advertisment -
Google search engine

Most Popular