Wednesday, May 21, 2025
Google search engine

Homeಅಪರಾಧಕಾನೂನುಶಾಸಕ ಮುನಿರತ್ನ ಬಳಿ ನಾಲ್ವರು ಮಾಜಿ ಸಿಎಂಗಳ ಖಾಸಗಿ ವಿಡಿಯೋ : ಅತ್ಯಾಚಾರ ಸಂತ್ರಸ್ತೆ...

ಶಾಸಕ ಮುನಿರತ್ನ ಬಳಿ ನಾಲ್ವರು ಮಾಜಿ ಸಿಎಂಗಳ ಖಾಸಗಿ ವಿಡಿಯೋ : ಅತ್ಯಾಚಾರ ಸಂತ್ರಸ್ತೆ ಮಹಿಳೆಯಿಂದ ಆರೋಪ

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರು ಹಲವು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರಾಪ್ ಮಾಡಿಸಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆ ಮಹಿಳೆ, ಮುನಿರತ್ನ ಬಳಿ ನಾಲ್ವರ ಮಾಜಿ ಸಿಎಂಗಳ ವಿಡಿಯೋಗಳು ಇವೆ. ಇವುಗಳನ್ನು ಬಳಸಿಕೊಂಡು ಅವರು ಹನಿಟ್ರ್ಯಾಪ್ ಮಾಡಿಸಿದ್ದಾರೆ. ವಿಡಿಯೋ ತೋರಿಸಿವೇ ಅವರು ಮಂತ್ರಿ ಆಗಿದ್ದರು. ನಾಲ್ವರು ಮಾಜಿ ಸಿಎಂ ಖಾಸಗಿ ವಿಡಿಯೋ ಇದೆ; ಆ ವಿಡಿಯೋ ಬಳಸಿಕೊಂಡು ರಾಜಕೀಯ ಲಾಭ ಪಡೆದಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಅತ್ಯಾಚಾರ ಪ್ರಕರಣದ ತನಿಕೆಗೆ ಎಸ್ ಐಟಿ ರಚನೆ ಮಾಡಲಾಗಿದೆ. ಮುನಿರತ್ನರನ್ನು ಎಸ್ ಐಟಿ ಗೌಪ್ಯವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. 2020 ರಲ್ಲಿ ಶಾಸಕ ಮುನಿರತ್ನ ನನಗೆ ಪರಿಚಯವಾದ್ರೂ, ಮಮತಾ, ವೆಂಕಟೇಶ್ ಎಂಬುವರ ಮೂಲಕ ನನಗೆ ಪರಿಚಯವಾದ್ರು. ನನಗೆ ಮುನಿರತ್ನ ವಿಡಿಯೋ ಕರೆ ಮಾಡಿದ್ದಾರೆ. ಶಾಸಕ ಮುನಿರತ್ನ ಗೋದಾಮಿಗೆ ಕರೆದುಕೊಂಡು ಹೋಗಿ ನನ್ನನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಜಾಮೀನು ಪಡೆದು ಬಂದ ಮೇಲೆ ನನಗೆ ಜೀವ ಭಯ ಇದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular