Sunday, June 22, 2025
Google search engine

Homeರಾಜ್ಯಬಿಲ್ಲವ ಸಮುದಾಯದಲ್ಲಿ 1ಲಕ್ಷ ಹೆಣ್ಣುಮಕ್ಕಳು ವೇಶ್ಯೆಯರಿದ್ದಾರೆ’ ಎಂಬ ಹೇಳಿಕೆ : ಅರಣ್ಯಾಧಿಕಾರಿ ವಿರುದ್ಧ FIR ದಾಖಲು!

ಬಿಲ್ಲವ ಸಮುದಾಯದಲ್ಲಿ 1ಲಕ್ಷ ಹೆಣ್ಣುಮಕ್ಕಳು ವೇಶ್ಯೆಯರಿದ್ದಾರೆ’ ಎಂಬ ಹೇಳಿಕೆ : ಅರಣ್ಯಾಧಿಕಾರಿ ವಿರುದ್ಧ FIR ದಾಖಲು!

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಂಜ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯರು ಹಾಗೂ ಭಜನೆ ಕುರಿತು ಅವರು ಕೀಳುಮಟ್ಟದ ಹೇಳಿಕೆ ನೀಡಿದ್ದನ್ನ ವಿರೋಧಿಸಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗ ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆದ ಬೆನ್ನಿಗೆ ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಬಿಲ್ಲವ ಯುವತಿಯರ ಬಗ್ಗೆ ಸಂಜೀವ ಪೂಜಾರಿ ಕೀಳುಮಟ್ಟದ ಹೇಳಿಕೆ ನೀಡಿದ್ದಾಗಿ ಆರೋಪಿಸಲಾಗಿದೆ. ಸಂಜೀವ ಪೂಜಾರಿ ಬಂಧನಕ್ಕೆ ಇಂದು ಸಂಜೆಯವರೆಗೆ ಹಿಂಜಾವೇ ಗಡುವು ನೀಡಿತ್ತು.

RELATED ARTICLES
- Advertisment -
Google search engine

Most Popular