ನಾಗಮಂಗಲ.ಕೊಬ್ಬರಿ ಬೆಂಬಲ ಬೆಲೆ 17000 ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ.ರಾಜ್ಯ ಸರ್ಕಾರ ರೈತರ ನಿರ್ಲಕ್ಷ ಧೋರಣೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆ ಪರಿಹಾರ ಮಾಡಬೇಕೆಂದು ನಾಗಮಂಗಲ ತಾಲೂಕಿನ ಕದಬಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ರೈತರು ಮೌನ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು
ವೇದಿಕೆ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಮಹಿಳಾ ಸಂಚಾಲಕಿ ನಂದಿನಿ ಜಯರಾಮ ಮಾತನಾಡಿ ರೈತರ ಪ್ರಸ್ತುತ ದುಸ್ಥಿತಿಗೆ ಕೇಂದ್ರ ಸರ್ಕಾರದ ಆಮದು ನೀತಿ ಕಾರಣವಾಗಿದೆ ಇದರ ಜೊತೆಗೆ ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷ ಮಾಡಿರುವುದು ಕೊಬ್ಬರಿ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದರು
ಮೂಲ ರೈತ ಸಂಘಟನೆಯ ನಾಗಮಂಗಲ ಅಧ್ಯಕ್ಷ ಸುರೇಶ ಮಾತನಾಡಿ ಈ ಹಿಂದೆ 19,000 ಇದ್ದ ಕೊಬ್ಬರಿ ನಿನಗೆ ಬೆಂಬಲ ಬೆಲೆ ಪ್ರಸ್ತುತ ಏಳು ಸಾವಿರ ಇದೆ ಈ ತಕ್ಷಣ ಸರ್ಕಾರವು ರೈತರ ಪರವಾಗಿ ನಿಲ್ಲಬೇಕೆಂದರು
ಮುಖಂಡರಾದ ಡಿ ಟಿ ಶ್ರೀನಿವಾಸ ಮಾತನಾಡಿ ಯಾವುದೇ ಸರ್ಕಾರ ಬರಲಿ ರೈತರನ್ನು ಕಡೆಗಣಿಸುತ್ತಿದೆ ಈ ಪ್ರತಿಭಟನೆಯ ಸಂಘಟನೆಯಿಂದ ಹತ್ತಿಕೊಂಡಿರುವ ಕಿಡಿ ಮುಂದಿನ ದಿನಗಳಲ್ಲಿ ಜ್ವಾಲೆ ಯಾಗಿ ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳುತ್ತದೆ ಎಚ್ಚರವಿರಲಿ ಈ ತಕ್ಷಣ ರೈತರ ಪರವಾಗಿ ನಿಂತು ಬೆಂಬಲ ಬೆಲೆ ಘೋಷಿಸಬೇಕು ಎಂದರು
ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಪ್ರಕಾಶ್.ರಂಗೇಗೌಡ. ರಾಮಸ್ವಾಮಿ. ಮೂಡ್ಲಿಗೌಡ.ಹಾಗೂ ತಾಲೂಕಿನ ದಲಿತ ಸಂಘಟನೆ. ರೈತ ಸಂಘಟನೆ. ರಾಜಕೀಯ ಮುಖಂಡರು. ಹಾಗೂ ಸಾವಿರಾರು ರೈತರು ಭಾಗವಹಿಸಿದ್ದರು
