ಬೆಳಗಾವಿ : ರಾಜ್ಯದಲ್ಲಿ ಭುಗಿಲೆದ್ದಿದ್ದ ರೈತರ ಪಹಣಿಗಳಲ್ಲಿ ವಕ್ಫ್ ನಮೂದಾಗಿರುವ ವಿಚಾರವಾಗಿ ಇಂದು ವಕ್ಫ್ ಮಂಡಳಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ನೋಟೀಸ್ ಕೂಡಲೇ ಹಿಂಪಡೆಯಿರಿ ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ ಈ ಒಂದು ವಿಚಾರವಾಗಿ ಮಾಜಿ ವಕ್ಫ್ ಸಚಿವೆ ಸಚಿ ಶಶಿಕಲಾ ಜೊಲ್ಲೆಯವರು ಕೊನೆಗೂ ಸಿಎಂ ಸಿದ್ದರಾಮಯ್ಯ ಅವರಿಗೆ ದೇವರು ಒಳ್ಳೆ ಬುದ್ಧಿ ಕೊಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈ ಒಂದು ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಯಾವುದೇ ಅಧಿಕಾರಿಗೆ ಆಗಲಿ ಇಂತಹ ಆದೇಶ ನೀಡಿಲ್ಲ. ಯಾವುದೇ ತಪ್ಪು ಸಹ ನಡೆದಿಲ್ಲ. ಆದರೆ ಈಗ ಇಂತಹ ಒಂದು ಬೆಳವಣಿಗೆ ನೋಡಿ ಸಹಜವಾಗಿ ನಾನು ಶಾಕ್ ಗೆ ಒಳಗಾಗಿದ್ದೆ. ಅಲ್ಲದೆ, ಈ ಒಂದು ವಿಚಾರವಾಗಿ ನಮ್ಮ ಬಿಜೆಪಿ ನಾಯಕರು ದೊಡ್ಡ ಮಟ್ಟದ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದು ದೇವರು ದೀಪಾವಳಿ ಸಂದರ್ಭದಲ್ಲಿ ಅವರಿಗೆ ಒಳ್ಳೆಯ ಬುದ್ದಿ ನೀಡಿದ್ದಾನೆ ಎಂದು ತಿಳಿಸಿದರು.
ವಕ್ಫ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಶಶಿಕಲಾ ಜಿಲ್ಲೆ ಅವರ ಪುತ್ರ ಬಸವ ಪ್ರಭು ಎನ್ನುವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಾಕ್ಸಂಬಾ ಗ್ರಾಮದಲ್ಲಿ ಅವರಿಗೆ ಸಂಬಂಧಪಟ್ಟಂತೆ ಜಮೀನು ಇತ್ತು. ೨೦೧೮ರ ವರೆಗೂ ಅವರ ಹೆಸರಿನಲ್ಲಿ ಇದ್ದು ಬಳಿಕ ಅದು ವಕ್ಫ್ ಆಸ್ತಿಯೆಂದು ತೋರಿಸುತ್ತಿದ್ದು ಇದರಿಂದ ಸಹಜವಾಗಿ ಅವರು ಶಾಕ್ ಗೆ ಒಳಗಾಗಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿದ ಎಲ್ಲಾ ನೋಟೀಸ್ ಗಳನ್ನು ಹಿಂಪಡೆಯಿರಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.