ಮಂಗಳೂರು (ದಕ್ಷಿಣ ಕನ್ನಡ): ಚಲಿಸುತ್ತಿದ್ದ ಸ್ಕೂಟಿಗೆ ಮರ ಬಿದ್ದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನಡೆದಿದೆ.
ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ಸ್ಕೂಟಿಗೆ ಪುಳಿಕುಕ್ಕು ಸಮೀಪದ ತಿರುವಿನಲ್ಲಿ ಬೃಹತ್ ಗಾತ್ರದ ಮರ ಬಿದ್ದಿದೆ. ಘಟನೆಯಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.