Tuesday, May 20, 2025
Google search engine

Homeರಾಜ್ಯಕೊರೊನ ಅಕ್ರಮ : ರಾಜ್ಯ ಸರ್ಕಾರದಿಂದ ಯಾವುದೇ ವರದಿ ಬಿಡುಗಡೆಯಾಗಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ...

ಕೊರೊನ ಅಕ್ರಮ : ರಾಜ್ಯ ಸರ್ಕಾರದಿಂದ ಯಾವುದೇ ವರದಿ ಬಿಡುಗಡೆಯಾಗಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಬೆಂಗಳೂರು : ಕೊರೊನ ಅಕ್ರಮದ ಕುರಿತಂತೆ ನ್ಯಾ.ಕುನ್ಹಾ ವರದಿ ವಿಚಾರವಾಗಿ ಇದುವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ವರದಿ ಬಿಡುಗಡೆಯಾಗಿಲ್ಲ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟನೆ ನೀಡಿದರು.

ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿದ್ದು ಸಾಬೀತಾಗಿದೆ. ಖಾಸಗಿ ಲ್ಯಾಬ್ ನವರಿಗೂ ಕೂಡ ಸರ್ಕಾರದ ಹಣ ಕೊಟ್ಟಿದ್ದಾರೆ. ಯಾವ ಮಟ್ಟಿಗೆ ಟೆಸ್ಟಿಂಗ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ICMR ಮಾರ್ಗಸೂಚಿ ಉಲ್ಲಂಘಿಸಿ ಅಕ್ರಮ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಎಫ್ಐಆರ್ ದಾಖಲಿಸಲು ಸಲಹೆ ಕೊಟ್ಟಿದ್ದಾರೆ. ಹೆಚ್ಚಿನ ಬೆಲೆಗೆ ಯಾವ ಪುರುಷಾರ್ಥಕ್ಕೆ ಖರೀದಿಸಿದ್ದರು ಗೊತ್ತಿಲ್ಲ ಎಂದು ತಿಳಿಸಿದರು.

ಜನ ಸಾಯುತ್ತಿದ್ದರೂ ಕೂಡ ದುಡ್ಡಿನ ಮೇಲೆ ಆಸೆಗಾಗಿ ಹೀಗೆ ಮಾಡಿದ್ದಾರೆ. 15 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ನಿವೃತ್ತ ನ್ಯಾ ಕುನ್ಹಾ ನೇತೃತ್ವದ ತನಿಖಾ ಸಮಿತಿ ವರದಿ ಇನ್ನು ಬರಲಿದೆ 1,28,000 ಜನರ ಸಾವಿನ ವರದಿ ನೀಡಿಯೇ ಇಲ್ಲ. ತನಿಖೆಯ ಸಂಪೂರ್ಣ ವರದಿ ಬಂದರೆ ಹೇಗೆ ಇರುತ್ತದೋ ಏನೋ. ತನಿಖೆಯ ಸಂಪೂರ್ಣ ವರದಿ ಬಂದಮೇಲೆ ಎಲ್ಲವೂ ಗೊತ್ತಾಗಲಿದೆ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

RELATED ARTICLES
- Advertisment -
Google search engine

Most Popular