Tuesday, May 20, 2025
Google search engine

Homeರಾಜ್ಯಪಿಎಂ ಕೇರ್ಸ್ ಫಂಡ್ ನಲ್ಲೂ ಭ್ರಷ್ಟಾಚಾರ ನಡೆದಿದೆ : ಸಚಿವ ದಿನೇಶ್ ಗುಂಡೂರಾವ್ ಆರೋಪ

ಪಿಎಂ ಕೇರ್ಸ್ ಫಂಡ್ ನಲ್ಲೂ ಭ್ರಷ್ಟಾಚಾರ ನಡೆದಿದೆ : ಸಚಿವ ದಿನೇಶ್ ಗುಂಡೂರಾವ್ ಆರೋಪ

ಬೆಂಗಳೂರು : ಕೋವಿಡ್ ವೇಳೆ ಪಿಎಂ ಕೇರ್ಸ್ ಫಂಡ್ ನಿಂದ ಬಂದ ವೆಂಟಿಲೇಟರ್ ಕೂಡ ಗುಣಮಟ್ಟದಲ್ಲ. ಅನೇಕ ಕಡೆಗೆ ಈ ವೆಂಟಿಲೇಟರ್ ಬಳಕೆ ಮಾಡಲು ಆಗದೆ ಹಾಗೆ ಇಡಲಾಗಿದೆ. ಪಿಎಂ ಕೇರ್ಸ್ ಫಂಡ್ ಹೇಗೆ ದುರ್ಬಳಕೆ ಆಗಿದೆ ಎಂಬುದು ದೊಡ್ಡ ವಿಷಯ. ಪಿಎಂ ಕೇರ್ಸ್ ಫಂಡ್ ನಲ್ಲೂ ಕೂಡ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಬೆಂಗಳೂರಲ್ಲಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕೋವಿಡ್ ವೇಳೆ ವೆಂಟಿಲೇಟರ್ ಖರೀದಿಯಲ್ಲೂ ಅವ್ಯವಹಾರ ನಡೆದಿದೆ. ನ್ಯಾ ಮೈಕಲ್ ಡಿ ಕುನಹ ನೀಡಿರುವ ವರದಿಯಲ್ಲಿ ಹಲವು ಅಂಶಗಳು ಬಹಿರಂಗವಾಗಿವೆ. ಈ ವರದಿಯಲ್ಲಿ ಗಾಬರಿ ಹುಟ್ಟಿಸುವಂತಹ ಅಂಶಗಳು ದಾಖಲಾಗಿವೆ. ಬಿಜೆಪಿ ಸರ್ಕಾರ ಯಾವ ರೀತಿ ಲೂಟಿ ಮಾಡಿದೆ ಅನ್ನೋದು ಎದ್ದು ಕಾಣುತ್ತದೆ. ವರದಿಯ ಅಂಶಗಳು ತಾರ್ಕಿಕ ಅಂತ್ಯ ಕಾಣಬೇಕು ಎನ್ನುವುದು ನಮ್ಮ ಉದ್ದೇಶ. ಅಂದಿನ ಸಚಿವರು ಸಿಎಂ ಒಪ್ಪಿಗೆ ಇಲ್ಲದೆ ಇಂತಹ ನಿರ್ಧಾರಗಳು ಆಗಲ್ಲ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗುವ ಕೆಲಸ ಮಾಡಬೇಕಿದೆ.

ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಕೊರತೆ ಇಲ್ಲ. ನಮ್ಮ ಸರ್ಕಾರ ಬಂದ ಆರಂಭದಲ್ಲಿ ಕೇವಲ 40% ಔಷಧ ಮಾತ್ರ ಸಿಗುತ್ತಿತ್ತು. ಉಳಿದ ಔಷಧಗಳನ್ನು ಆಸ್ಪತ್ರೆಗಳಲ್ಲಿ ಖರೀದಿ ಮಾಡಲಾಗುತ್ತಿತ್ತು. ಈಗ 75 ಪರ್ಸೆಂಟ್ ವೈದಿಕೆ ಸರಬರಾಜು ನಿಗಮದಿಂದಲೇ ಔಷಧ ಪೂರೈಕೆಯಾಗುತ್ತಿದೆ. ತಾಂತ್ರಿಕ ಕಾರಣದಿಂದ ಟೆಂಡರ್ ವಿಳಂಬವಾಗಿದೆ ಎಂದು ತಿಳಿಸಿದರು.

ಈ ವರ್ಷವೂ ಈಡೆಂಟ್ ಪ್ರಕಾರವೇ ಔಷಧಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ ಸದ್ಯ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದ ಔಷಧ ಇದೆ ಯಾವ ಔಷಧ ಇಲ್ಲವೋ ಅದನ್ನು ಸ್ಥಳೀಯವಾಗಿ ಖರೀದಿಸಲು ಸೂಚಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular