Tuesday, May 20, 2025
Google search engine

Homeರಾಜ್ಯಜಾತಿ ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಜಾತಿ ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ತುಮಕೂರು: ರಾಜಕೀಯ ನಾಯಕನೊಬ್ಬ ಜನಪರವಾಗಿ ಇದ್ದಾನೋ, ಇಲ್ಲವೋ ಗೊತ್ತಿಲ್ಲದೆ, ಆತನಿಗೆ ರಾಜಕೀಯ ಜ್ಞಾನ ಇದೆಯೋ, ಇಲ್ಲವೋ? ಗೊತ್ತಿಲ್ಲದೆ ನಮ್ಮ ಜಾತಿಯವನು ಎನ್ನುವ ಏಕೈಕ ಕಾರಣಕ್ಕೆ ಮತ ನೀಡುವವರು ಇದ್ದಾರೆ, ಕೆಲವು ನಾಯಕರು ಪ್ರಜ್ಞಾವಂತರಿದ್ದರೂ ತಮ್ಮ ಜಾತಿಯವನಲ್ಲ ಎನ್ನುವ ಕಾರಣಕ್ಕೆ ಮತ ನೀಡಲು ನಿರಾಕರಿಸುತ್ತಾರೆ. ಹೀಗಾದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ” ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಹೊರ ಹಾಕಿದ್ದಾರೆ.

ಶುಕ್ರವಾರ(ನ22) ನಡೆದ ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಕ್ವೆಸ್ಟ್ ಶಿಕ್ಷಣ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ”ಡಾಕ್ಟರ್, ಎಂಜಿನಿಯರಿಂಗ್ ಓದಿದ್ದರೂ ಮೌಢ್ಯ, ಕಂದಾಚಾರ ಬಿಡುವುದೇ ಇಲ್ಲ.ಇಂಥಾ ಶಿಕ್ಷಣ ಬೇಕಾ? ಬಸವಣ್ಣನವರು ಕರ್ಮ‌ ಸಿದ್ಧಾಂತ ತಿರಸ್ಕರಿಸಿದ್ದರು. ಈಗ ಬಸವಣ್ಣನವರ ಹೆಸರಲ್ಲೇ ಕರ್ಮಸಿದ್ಧಾಂತ ಪಾಲಿಸುವವರು ಇದ್ದಾರೆ. ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಿಕಾಸ ಆಗಲು, ಸ್ವಾಭಿಮಾನಿಗಳಾಗಲು ಶಿಕ್ಷಣ ಅತ್ಯಗತ್ಯ. ಬಹಳ ಮಂದಿ ಶಿಕ್ಷಣ ಪಡೆದಿರುತ್ತಾರೆ, ಆದರೆ ಅವರಲ್ಲಿ ಸಾಮಾಜಿಕ ಸ್ಪಂದನೆ, ಮಾನವೀಯ ಸ್ಪಂದನೆ ಇರುವುದಿಲ್ಲ. ಶಿಕ್ಷಣ ಕಲಿತೂ ಜಾತಿವಾದಿಗಳಾದರೆ, ಮನುಷ್ಯ ತಾರತಮ್ಯ ಪಾಲಿಸೋದು ಮಾಡಿದ್ರೆ ಅಂಥಾ ಶಿಕ್ಷಣದಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

”ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಈ ಹಕ್ಕು ಸುಮ್ಮನೆ ಬರಲಿಲ್ಲ. ಶೂದ್ರರ ರೀತಿ, ಮಹಿಳೆಯರನ್ನೂ ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಮೂಲೆಯಲ್ಲಿ ಇರಿಸಲಾಗಿತ್ತು. ಆದರೆ ಈಗ ನಿರಂತರ ಹೋರಾಟದ ಫಲವಾಗಿ ಶಿಕ್ಷಣದ ಹಕ್ಕು ಬಂದಿದೆ. ಈ ಶಿಕ್ಷಣ ವೈಚಾರಿಕವಾಗಿರಬೇಕು, ವೈಜ್ಞಾನಿಕವಾಗಿರಬೇಕು” ಎಂದರು.

”ಹೇಳಿಕೊಳ್ಳಲು ವಿದ್ಯಾವಂತರು. ಆದರೆ, ಇವನು ನಮ್ ಜಾತಿಯವನಲ್ಲ, ಓಟು ಹಾಕೋದು ಬೇಡ ಅಂತಾರೆ. ಮತ್ತೆ ಕೆಲವರು ಇವನು ನಮ್ಮ ಜಾತಿಯವನು ಅದಕ್ಕೇ ಓಟು ಹಾಕಿ ಅಂತಾರೆ. ಅವನಿಗೆ ರಾಜಕೀಯ ಪ್ರಜ್ಞೆ , ತಿಳಿವಳಿಕೆ ಇದೆಯೊ, ಇಲ್ಲವೋ ಗೊತ್ತಿಲ್ಲ. ಕಾಳಜಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಜಾತಿ ನೋಡು, ಓಟು ಹಾಕು ಅಷ್ಟೆ. ಇದಕ್ಕೆ ವಿದ್ಯೆ ಕಲಿಬೇಕಾ?” ಎಂದು ಪ್ರಶ್ನೆಗಳ ಸುರಿಮಳೆಗೈದರು.

ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಕೃಷ್ಣಮೂರ್ತಿ, ಸಂಸ್ಥೆಯ ಮುಖ್ಯಸ್ಥೆ ಕನ್ನಿಕಾ ಪರಮೇಶ್ವರಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular