Tuesday, May 20, 2025
Google search engine

Homeರಾಜ್ಯಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆ

ಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆ

ಕೊಪ್ಪಳ: ಕುಷ್ಟಗಿ ತಾಲೂಕಿನ ಬೀಳಗಿ ಗ್ರಾಮದ ಕೆರೆಯ ಹತ್ತಿರ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಬಲಿದಾನ ಸ್ಮಾರಕ ಶಿಲ್ಪಗಳ ಗುಂಪಿಗೆ ಸೇರಿದ ಶಾಸನ ಇದಾಗಿದೆ ಎಂಬುವುದಾಗಿ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಆತ್ಮ ಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷವಾದುದಾಗಿದೆ. ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ತೊಣಚಿ ಗ್ರಾಮದ ಶಾಸನದಲ್ಲಿ ಉರಿ ಉಯ್ಯಾಲೆಯ ಉಲ್ಲೇಖವಿದೆ. ಈ ರೀತಿಯ ಶಿಲ್ಪಗಳು ಕರ್ನಾಟಕದಲ್ಲಿ ಬೆರಳೆಣಕಿಯಷ್ಟು ದೊರೆತಿವೆ ಎಂದು ಹೇಳಲಾಗಿದೆ.

ಈ ಶಾಸನಗಳು ಮೂರು ಹಂತಗಳನ್ನು ಒಳಗೊಂಡಿವೆ. ಅವು ೯ನೇ ಶತಮಾನದ್ದು ಎಂದು ನಂಬಲಾಗಿದೆ. ಈ ಶಿಲ್ಪಗಳು ಕರ್ನಾಟಕದಲ್ಲಿ ಅಪರೂಪವಾಗಿ ದೊರೆಯುವ ಪ್ರಮುಖ ಐತಿಹಾಸಿಕ ಸಾಕ್ಷ್ಯಗಳಾಗಿವೆ ಎಂದು ಇತಿಹಾಸಕಾರರು ಹೇಳುತ್ತಾರೆ.

RELATED ARTICLES
- Advertisment -
Google search engine

Most Popular