Wednesday, May 21, 2025
Google search engine

Homeರಾಜ್ಯಸಿ.ಟಿ.ರವಿ ಪ್ರಕರಣದಲ್ಲಿ ಕರ್ತವ್ಯಲೋಪ : ಇನ್‌ಸ್ಪೆಕ್ಟರ್‌ ಅಮಾನತು

ಸಿ.ಟಿ.ರವಿ ಪ್ರಕರಣದಲ್ಲಿ ಕರ್ತವ್ಯಲೋಪ : ಇನ್‌ಸ್ಪೆಕ್ಟರ್‌ ಅಮಾನತು

ಬೆಳಗಾವಿ: ಕರ್ತವ್ಯಲೋಪದ ಹಿನ್ನಲೆಯಲ್ಲಿ ಖಾನಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಅವರನ್ನು ಅಮಾನತು ಮಾಡಲಾಗಿದೆ. ಮಂಜುನಾಥ್ ನಾಯಕ್ ಅಮಾನತುಗೊಂಡಿರುವ ಪೊಲೀಸ್ ಇನ್‌ಸ್ಪೆಕ್ಟರ್‌ .

ಈ ಸಂಬಂಧ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಅಮಾನತು ಆದೇಶ ಹೊರಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಹಿರೇಬಾಗೆವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆ ತಂದಾಗ ಹಲವು ರಾಜಕೀಯ ನಾಯಕರು ಇನ್ಸಪೆಕ್ಟರ್ ಕೊಠಡಿವರೆಗೆ ಪ್ರವೇಶಿಸಿ ಕುಳಿತು ಚರ್ಚೆ ನಡೆಸಿದ್ದರು. ಬಿಜೆಪಿ ನಾಯಕರನ್ನು ಠಾಣೆಯ ಒಳಗಡೆ ಬರಲು ಅನುಮತಿ ನೀಡಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಆದರೆ ಗೃಹ ಸಚಿವರು ನಗರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸುತ್ತಿರುವ ನಡುವೆ ಈ ಅಮಾನತು ಆದೇಶ ಹೊರಬಿದ್ದಿರುವುದು ಕುತೂಹಲ ಕೆರಳಿಸಿದೆ.

ಖಾನಾಪುರ ಬಂದ್:
ಖಾನಾಪುರ ಸಿಪಿಐ ಮಂಜುನಾಥ ನಾಯಕ ಅಮಾನತು ಆದೇಶ ಖಂಡಿಸಿ ನಾಳೆ ಗುರುವಾರ ಖಾನಾಪುರ ಬಂದ್ ಗೆ ವಿವಿಧ ಸಾಮಾಜಿಕ ಸಂಘಟನೆಗಳು ಕರೆ ನೀಡಿವೆ. ಸಂಘಟನೆಗಳಿಗೆ ಪ್ರತಿಪಕ್ಷ ಬಿಜೆಪಿ ಸಹ ಬೆಂಬಲ ಸೂಚಿಸಿದೆ. ಬೆಳಗಾವಿ ಕಮಿಷ್ನರ್ ಯಡಾ ಮಾರ್ಟಿನ್ ಮತ್ತು ಎಸ್ಪಿ ಡಾ. ಭೀಮಾಶಂಕರ ಮೇಲೆ ಕೈಗೊಳ್ಳಬೇಕಿದ್ದ ಸರಕಾರ ಮತ್ತು ಉತ್ತರ ವಲಯ ಐಜಿ ವಿನಾಕಾರಣ ಕೆಳಹಂತದ ಅಧಿಕಾರಿಯನ್ನು ಬಲಿಪಶು ಮಾಡಿದ್ದಾರೆ ಎಂದು ಸಂಘಟನೆಗಳು ಅಸಮಧಾನ ಹೊರಹಾಕಿದೆ.

RELATED ARTICLES
- Advertisment -
Google search engine

Most Popular