Wednesday, May 21, 2025
Google search engine

Homeರಾಜ್ಯಸುದ್ದಿಜಾಲಪಕ್ಷ ಸಂಘಟನೆ ಆಗಬೇಕಾದರೆ ಮುಖಂಡರು- ಕಾರ್ಯಕರ್ತರ ಪರಸ್ಪರ ಹೊಂದಾಣಿಕೆ ಬಹು ಮುಖ್ಯ: ಬಿಜೆಪಿ ಮುಖಂಡ ಮಿರ್ಲೆವರದರಾಜು

ಪಕ್ಷ ಸಂಘಟನೆ ಆಗಬೇಕಾದರೆ ಮುಖಂಡರು- ಕಾರ್ಯಕರ್ತರ ಪರಸ್ಪರ ಹೊಂದಾಣಿಕೆ ಬಹು ಮುಖ್ಯ: ಬಿಜೆಪಿ ಮುಖಂಡ ಮಿರ್ಲೆವರದರಾಜು

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಕ್ಷ ಸಂಘಟನೆಯಾಗಬೇಕಾದರೆ ಮುಖಂಡರು ಮತ್ತು ಕಾರ್ಯಕರ್ತರು ಪರಸ್ಪರ ಹೊಂದಾಣಿಕೆಯಿoದ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಮಿರ್ಲೆವರದರಾಜು ಹೇಳಿದರು.

ಕೆ.ಆರ್.ನಗರ ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು
ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಜಗ ಮೆಚ್ಚಿದ ಪ್ರಧಾನ ಮಂತ್ರಿಗಳನ್ನು ಪಡೆದಿರುವ ನಾವು ಧನ್ಯರು ಎಂದರು.

ಪ್ರತಿ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ನಮ್ಮ ಪಕ್ಷ ಮತ ಗಳಿಕೆಯಲ್ಲಿ ಗಣನೀಯವಾಗಿ ಕುಸಿತ ಕಾಣುತ್ತಿದ್ದು ಇದನ್ನು ಅರಿತು ನಾವು ಭವಿಷ್ಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದರು.
ಮುoದೆ ನಾನು ಸಂಘಟನೆಯ ವಿಚಾರದಲ್ಲಿ ಸಾರಥಿಯಾಗಿ ನಿಲ್ಲಲಿದ್ದು ಪಕ್ಷದ ಸರ್ವರೂ ಕೈಜೋಡಿಸಿ ಮಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಜಯಬೇರಿ ಬಾರಿಸುವಂತೆ ಮಾಡೋಣ ಎಂದು ಕರೆ ನೀಡಿದರು.

ಸಂಘಟನೆಯ ವಿಚಾರದಲ್ಲಿ ಎಲ್ಲರೂ ಮುಕ್ತವಾಗಿ ಮಾತನಾಡಿ ಯಾವುದೇ ಸಮಸ್ಯೆ ಮತ್ತು ಸಲಹೆಗಳಿದ್ದರೆ ನಮಗೆ ನೀಡಬೇಕೆಂದರಲ್ಲದೆ ನಾವು ಸಂಘಟನೆಯ ವಿಚಾರದಲ್ಲಿ ಜಿಲ್ಲೆಯಲ್ಲಿಯೆ ಪ್ರಥಮ ಸ್ಥಾನ ಗಳಿಸಬೇಕೆಂದರು.

ಚುನಾವಣೆ ಸಮಯದಲ್ಲಿ ಸಂಪನ್ಮೂಲ ಬಂದಾಗ ಒಂದಾಗುವ ಬದಲು ಕೇಂದ್ರ ಸರ್ಕಾರದ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಹಿಂದೆ ಕರ್ನಾಟಕದ ಏಳಿಗೆಗೆ ಬಿಜೆಪಿ ಸರ್ಕಾರಗಳು ಮಾಡಿದ ಯೋಜನೆಗಳನ್ನು ಪ್ರಚುರಪಡಿಸಬೇಕೆಂದು ನುಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ವತಿಯಿಂದ ಹೊರ ತಂದಿರುವ ನೂತನ ವರ್ಷದ ದಿನ ದರ್ಶಿಕೆಯನ್ನು ಬಿಡುಗಡೆ ಮಾಡಿ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಕೆ.ಆರ್.ನಗರ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮ, ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಉಮಾಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ಅಂಬುಜಾ, ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್, ರೈತ ಮೋರ್ಚ ಅಧ್ಯಕ್ಷ ಶಂಭುಲಿoಗಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಆರ್.ಮಂಜು, ಪಕ್ಷದ ಮುಖಂಡರಾದ ಎ.ಶೇಖರ್,
ಮಹದೇವ, ಪ್ರದೀಪ್, ಎಂ.ಎಸ್.ರಾಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular