Monday, January 12, 2026
Google search engine

Homeರಾಜ್ಯವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯು

ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯು

ಕಾರವಾರ: ಸಿದ್ದಾಪುರದ ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತಕ್ಕೆ ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ. ಜಲಪಾತಕ್ಕೆ ಆರು ಜನ ಯುವಕರು ತೆರಳಿದ್ದ ವೇಳೆ ಶಿರಸಿ ಮೂಲದ ಸುಹಾಸ್ ಶಟ್ಟಿ (22) ಹಾಗೂ ಅಕ್ಷಯ್ ಭಟ್ (22) ಕಾಲುಜಾರಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಆಗಮಿಸಿ ಶೋಧಕಾರ್ಯ ನಡೆಸಿ ನಂತರ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular