Tuesday, May 20, 2025
Google search engine

Homeರಾಜ್ಯಮುಳ್ಳಯ್ಯನಗಿರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿರ್ಬಂಧ

ಮುಳ್ಳಯ್ಯನಗಿರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿರ್ಬಂಧ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರು 60 ದಿನಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ನಿಷೇಧ ಜಾರಿಗೆ ತಂದಿದ್ದಾರೆ.

ಏಪ್ರಿಲ್ 22ರಿಂದ ಜೂನ್ 20ರ ವರೆಗೆ ಉಪಯೋಗಿಸಿ ಎಸೆಯುವ 0.00 ರಿಂದ 4.99 ಲೀಟರ್ ವರೆಗೆ ಕುಡಿಯುವ ನೀರಿನ ಬಾಟಲಿಗಳು, ಚಿಪ್ಸ್, ಗುಟ್ಕಾ ಪ್ಯಾಕೆಟ್‌ಗಳು ಹಾಗೂ ಇತರ ತಿನ್ನಲು ಬಳಸುವ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

ಈ ಆದೇಶವನ್ನು ಪ್ಲಾಸ್ಟಿಕ್ ಉತ್ಪನ್ನಗಳ ನಿಯಮ 1999ರ ನಿಯಮ 3(ಬಿ) ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅಡಿಯಲ್ಲಿ ಜಾರಿಗೆ ತರುವಂತೆ ಸೂಚಿಸಲಾಗಿದೆ.

ನಿಷೇಧ ಉಲ್ಲಂಘನೆ ಮಾಡಿದರೆ ಬಿಎನ್ಎಸ್ 221 ಮತ್ತು ಇತರ ಸಂಬಂಧಿತ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

RELATED ARTICLES
- Advertisment -
Google search engine

Most Popular