Wednesday, May 21, 2025
Google search engine

Homeರಾಜ್ಯಬಾಗಲಕೋಟೆ: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ 110 ರೂ. ವಸೂಲಿ ಮಾಡುತ್ತಿರುವ ಕರ್ನಾಟಕ ಒನ್ ಕೇಂದ್ರದ...

ಬಾಗಲಕೋಟೆ: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ 110 ರೂ. ವಸೂಲಿ ಮಾಡುತ್ತಿರುವ ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿ

ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಫಲಾನುಭವಿಗಳಿಂದ ಹಣ ಪಡೆಯಲಾಗುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಜಮಖಂಡಿ ನಗರದ ಲಕ್ಕನ ಕೆರೆ ಸಮೀಪ, ವಿಠ್ಠಲ‌ಮಂದಿರದ ಬಳಿ ಇರುವ ಕರ್ನಾಟಕ ಒನ್ ಕೇಂದ್ರದಲ್ಲಿ ಸಿಬ್ಬಂದಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದ್ದು, ಒಂದು ಅರ್ಜಿ ಹಾಕಲು ಒಬ್ಬ ಮಹಿಳಾ‌ ಫಲಾನುಭವಿಯಿಂದ 110 ರೂ.ಪಡೆಯುತ್ತಿದ್ದಾರೆ.

ಸ್ವತಃ ಕರ್ನಾಟಕ ಒನ್‌ ಕೇಂದ್ರದ ಸಿಬ್ಬಂದಿ ಫಲಾನುಭವಿಯ ಕುಟುಂಬಸ್ಥರೊಂದಿಗೆ ಮಾತನಾಡಿದ ವೀಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರ್ನಾಟಕ ಒನ್ ಕೇಂದ್ರವಿರುವ ಕಟ್ಟಡದ ಬಾಡಿಗೆ ಕಟ್ಟಲು ಆಗುತ್ತಿಲ್ಲ..ಅದಕ್ಕೆ ದುಡ್ಟು ತೆಗೆದುಕೊಳ್ಳುತ್ತಿದ್ದೇವೆಂದು ವಿಡಿಯೋದಲ್ಲಿ ಸಿಬ್ಬಂದಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular