Monday, May 19, 2025
Google search engine

Homeರಾಜ್ಯಸುದ್ದಿಜಾಲಹುಟ್ಟುಹಬ್ಬದ ಹೆಸರಿನಲ್ಲಿ ಸರ್ಕಾರದ ಫಲಕ ದುರ್ಬಳಕೆ: ಶಾಸಕರ ಬೆಂಬಲಿಗರ ವಿರುದ್ಧ ಯುವ ಜೆಡಿಎಸ್ ಕಿಡಿ

ಹುಟ್ಟುಹಬ್ಬದ ಹೆಸರಿನಲ್ಲಿ ಸರ್ಕಾರದ ಫಲಕ ದುರ್ಬಳಕೆ: ಶಾಸಕರ ಬೆಂಬಲಿಗರ ವಿರುದ್ಧ ಯುವ ಜೆಡಿಎಸ್ ಕಿಡಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಸರ್ಕಾರಿ ಜಾಹೀರಾತು ಫಲಕಗಳನ್ನು ಕಾಂಗ್ರೇಸ್ ಪಕ್ಷದ ನಾಯಕರ ಹುಟ್ಟುಹಬ್ಬ, ವೈಯಕ್ತಿಕ ಕಾರ್ಯಕ್ರಮಗಳಿಗೆ ಜಾಹೀರಾತು ಬ್ಯಾನರ್ ಅಳವಡಿಸಲು ಮೀಸಲಿಡಲಾಗುತ್ತಿದೆ ಎಂದು ಸಾಲಾ ಗ್ರಾಮ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ್ ಮಧು ಆರೋಪಿಸಿದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಕೆ .ಎಂ. ಎಸ್. ಭವನದಲ್ಲಿ ನಡೆದ ಯುವ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು ಚುಂಚನಕಟ್ಟೆ ಗ್ರಾಮ ಐತಿಹಾಸಿಕವಾಗಿ ಪ್ರವಾಸಿ ತಾಣವಾಗಿದ್ದು ಗ್ರಾಮದಲ್ಲಿರುವ ಉಪತಹಶೀಲ್ದಾರ್ ಅವರ ನಾಡಕಚೇರಿ ಬಳಿ ಇರುವ ಜಾಹೀರಾತು ಫಲಕಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಾಧನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಅಳವಡಿಸಲಾಗಿದ್ದು ಆದರೆ ಕ್ಷೇತ್ರದ ಶಾಸಕ ರವಿಶಂಕರ್ ಅವರ ಓಲೈಕೆಗಾಗಿ ಕೆಲ ಮುಖಂಡರು ಸರ್ಕಾರಿ ಜಾಹೀರಾತು ಫಲಕಗಳನ್ನು ಆಕ್ರಮಿಸಿ ವೈಯಕ್ತಿಕವಾಗಿ ಜಾಹೀರಾತುಗಳ ಬ್ಯಾನರ್ ಗಳನ್ನು ಅಳವಡಿಸುತ್ತಿದ್ದು ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಶಾಸಕರು ಶಾಸಕರ ಬೆಂಬಲಿಗರು ವೈಯಕ್ತಿಕವಾಗಿ ಪತ್ರಿಕೆಗಳಿಗೆ ಇಲ್ಲ ಅನ್ಯ ಸ್ಥಳಗಳಿಗೆ ಅನುಮತಿ ಪಡೆದು ಜಾಹೀರಾತು ಹಾಕಿ ಪ್ರಚಾರ ಪಡೆಯಲಿ ಆದರೆ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡಲಾಗುವ ಸರ್ಕಾರಿ ನಾಮಫಲಕಗಳನ್ನು ಆಕ್ರಮಿಸಿ ತಮಗಿಷ್ಟ ಬಂದ ನಾಯಕರ ಹುಟ್ಟುಹಬ್ಬಗಳ ಜಾಹೀರಾತು ಬ್ಯಾನರ್ ಗಳನ್ನು ಅಳವಡಿಸುವುದು ಅಪರಾಧವಲ್ಲವೇ ಇದಕ್ಕೆ ಅವಕಾಶ ಮಾಡಿಕೊಡುವ ತಹಶೀಲ್ದಾರ್ ಮತ್ತು ನಾಡಕಚೇರಿ ಸಿಬ್ಬಂದಿಗಳ ಕ್ರಮ ತಪ್ಪಾಗಿದ್ದು ತಕ್ಷಣ ಬ್ಯಾನರ್ ಗಳನ್ನು ತೆರವುಗೊಳಿಸಿ ಎಂದು ಆಗ್ರಹಿಸಿದರು.
ತಮ್ಮದೇ ಸರ್ಕಾರವಿದೆ ಎಂದು ಹುಟ್ಟುಹಬ್ಬದ ಜಾಹೀರಾತುಗಳನ್ನು ಸರ್ಕಾರಿ ನಾಮಫಲಕಗಳಲ್ಲಿ ಅಳವಡಿಸಿಕೊಳ್ಳುವ ಇವರುಗಳು ಸಾಮಾನ್ಯ ವ್ಯಕ್ತಿಗಳು ಅಥವಾ ಸಾರ್ವಜನಿಕರು ಇದೇ ರೀತಿ ಕ್ರಮ ಅನುಸರಿಸಿದರೆ ಅವಕಾಶ ಮಾಡಿಕೊಡುವರೇ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಹಳಿಯೂರು ಗ್ರಾಮ ಮಾಜಿ ಉಪಾಧ್ಯಕ್ಷ ಭಾಸ್ಕರ್ ಜೆಡಿಎಸ್ ಮುಖಂಡ ಹಿರಣ್ಣಯ್ಯ ಅರಕೆರೆ ಕೃಷ್ಣ,ರಾಮೇಗೌಡ,ಬೆಣಗನಹಳ್ಳಿ ದೀಪು ಸೇರಿದಂತೆ ಮತ್ತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular