ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರಸಿದ್ಧ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಗೆ ಶನಿವಾರ ಬಾಂಬ್ ಬೆದರಿಕೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಇಮೇಲ್ ಮೂಲಕ ಮುಂಬೈ ವಿಮಾನ ನಿಲ್ದಾಣದ ಪೊಲೀಸ್ ಇಲಾಖೆಯ ಅಧಿಕೃತ ಐಡಿಗೆ ಕಳುಹಿಸಲಾಗಿದೆ. ಈ ಇಮೇಲ್‌ನಲ್ಲಿ ಭಯೋತ್ಪಾದಕ ಅಫ್ಜಲ್ ಗುರು ಮತ್ತು ಶಂಕರ್ ಸೇವಕು ಅವರನ್ನು “ಅನ್ಯಾಯವಾಗಿ” ಗಲ್ಲಿಗೇರಿಸಲಾಗಿದೆ ಎಂದು ಉಲ್ಲೇಖಿಸಿ ದಾಳಿ ಎಸಗಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಪೊಲೀಸರು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಭದ್ರತಾ ಕ್ರಮಗಳನ್ನು ತೀವ್ರಗೊಳಿಸಿದ್ದಾರೆ. ವಿಮಾನ ನಿಲ್ದಾಣ ಮತ್ತು ತಾಜ್ ಹೋಟೆಲ್‌ಗಳ ಸುತ್ತಮುತ್ತ ಹೆಚ್ಚಿದ ಪೊಲೀಸ್ ಭದ್ರತೆ ಮತ್ತು ತುರ್ತು ದಳಗಳ ಸನ್ನಾಹದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೂರ್ಣ ತನಿಖೆ ಪ್ರಾರಂಭವಾಗಿದ್ದು, ಇಮೇಲ್‌ನ ಮೂಲ ಹಾಗೂ ನಿಜಾಸಾಲು ತಿಳಿದುಕೊಳ್ಳಲು ಸೈಬರ್ ಕ್ರೈಂ ವಿಭಾಗ ಕೂಡ ಕಾರ್ಯಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.