ತುಮಕೂರು: ನಮ್ಮ ಮೆಟ್ರೋ ತುಮಕೂರಿಗೂ ವಿಸ್ತಾರವಾಗಲಿದೆ ಎಂದು ಇಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಂಆರ್‌ಸಿಎಲ್ ಈಗಾಗಲೇ ವರದಿ ಸಲ್ಲಿಸಿದ್ದು, ನಮ್ಮ ಅವಧಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ ಎಂದು ಹೇಳಿದರು.
ತುಮಕೂರು ಜನರಿಗೆ ಇನ್ನೊಂದು ತಿಂಗಳಲ್ಲಿ ದೊಡ್ಡ ಸುದ್ದಿ ದೊರೆಯಲಿದೆ, ಅದು ಇಡೀ ನಗರದ ಚಿತ್ರಣವನ್ನು ಬದಲಾಯಿಸುತ್ತದೆ. ತುಮಕೂರು ಬೆಂಗಳೂರು ನಂತರದ ಎರಡನೇ ಮಹತ್ವದ ನಗರವಾಗಿ ಬೆಳೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹಣದ ಬಗ್ಗೆ ಕೇಳಲ್ಲ. ಅಭಿವೃದ್ದಿ ಬಗ್ಗೆ ಮಾತ್ರ ಕೇಳುತ್ತಾರೆ ಹೀಗಾಗಿ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೇನೆ. ಎಂದು ವಿ.ಸೋಮಣ್ಣ ತಿಳಿಸಿದರು.