ಮಂಗಳೂರು (ದಕ್ಷಿಣ ಕನ್ನಡ) : ಜಮ್ಮು-ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು 26 ಮಂದಿ ಅಮಾಯಕ ಪ್ರವಾಸಿಗರ ಬರ್ಬರ ಕೃತ್ಯಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ ‘ಅಪರೇಷನ್ ಸಿಂದೂರ’ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, 20205 ರ ಮೇ 20ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ನಗರದ ಪಿವಿಎಸ್ ವೃತ್ತದಿಂದ ಕರಾವಳಿ ಉತ್ಸವ ಮೈದಾನದವರೆಗೆ ಮೆರವಣಿಗೆ ಮತ್ತು ಸಂಜೆ 5ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಸಂಚಾಲಕ ಕೇಶವ ನಂದೋಡಿ ಹೇಳಿದ್ದಾರೆ. ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸಿಂಧೂರ ವಿಜಯೋತ್ಸವ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವು ನಮ್ಮ ಭಾರತೀಯ ಸೇನಾ ಯೋಧರ ಶೌರ್ಯ, ಪರಾಕ್ರಮಗಳನ್ನು ಗೌರವಿಸುವ ಜೊತೆಗೆ, ಅನ್ಯಾಯ, ಬರ್ಬರತೆಗಳನ್ನು ಸದೆಬಡಿಯುವ ದೇಶದ ಶಕ್ತಿ, ಸಾಮರ್ಥ್ಯ ಹಾಗೂ ದೃಢಸಂಕಲ್ಪ ಶಕ್ತಿಯನ್ನೂ ವಿಶ್ವದ ಎದುರು ತೆರೆದಿಟ್ಟಿದೆ ಎಂದರು.