Tuesday, May 20, 2025
Google search engine

Homeರಾಜ್ಯಸುದ್ದಿಜಾಲಯುವರಾಜ ಕಾಲೇಜು ಪ್ರಾಧ್ಯಾಪಕಿ ಡಾ.ಎನ್.ಎಸ್.ದೇವಕಿ ಅವರಿಗೆ ಅಭಿನಂದನೆ

ಯುವರಾಜ ಕಾಲೇಜು ಪ್ರಾಧ್ಯಾಪಕಿ ಡಾ.ಎನ್.ಎಸ್.ದೇವಕಿ ಅವರಿಗೆ ಅಭಿನಂದನೆ

ಮೈಸೂರು: ಯುವರಾಜ ಕಾಲೇಜು ಅಣುಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಎನ್.ಎಸ್.ದೇವಕಿ ಅವರು ವೃತ್ತಿಯಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಡಾ. ಎನ್.ಎಸ್.ದೇವಕಿ ಅವರು ಯುವರಾಜ ಕಾಲೇಜಿನಲ್ಲಿ ಮೂರು ದಶಕಗಳಿಂದ ಅಧ್ಯಾಪಕರಾಗಿ, ಸಹ ಪ್ರಾಧ್ಯಾಪಕಿಯಾಗಿ, ಪ್ರಾಧ್ಯಾಪಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿದ್ದಾರೆ. ಅಣುಜೀವ ವಿಜ್ಞಾನ ವಿಭಾಗದ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಲೇಜಿನ ಐಕ್ಯೂಎಸಿ ಸಂಯೋಜಕರಾಗಿ, ವಿಜ್ಞಾನ ವೇದಿಕೆಯ ಸಂಯೋಜಕರಾಗಿ, ಪರಿಸರ ಸಂರಕ್ಷಣಾ ವೇದಿಕೆ ಸಂಯೋಜಕರಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿ ಅಧ್ಯಾಪಕರ, ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಯುಜಿಸಿ ಅನುದಾನದಿಂದ ಭತ್ತದ ಬೆಳೆಗೆ ತಗಲುವ ಬೆಂಕಿ ರೋಗದ ಬಗ್ಗೆ ಇವರು ಸಂಶೋಧನೆ ಮಾಡಿದ್ದಾರೆ. ರಾಷ್ಟ್ರೀಯ ರಾಷ್ಟ್ರ ಅಂಡ್

ಡಾ. ಎನ್.ಎಸ್.ದೇವಕಿ ಅವರ ಅಧ್ಯಯನ, ಬೋಧನೆ, ಸಂಶೋಧನೆಗಾಗಿ ೨೦೧೬ ರಲ್ಲಿ ನವದೆಹಲಿಯ ಇನ್ಸಾಟೀರ‍್ಸ್ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೮ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಸಾಧಕಿ ಪ್ರಶಸ್ತಿ ಬಂದಿದೆ. ಇವರು ಬರೆದಿರುವ ಐವತ್ತೆರಡು ಸಂಶೋಧನಾ ಲೇಖನಗಳು ರಾಷ್ಟ್ರಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮಾರ್ಗದರ್ಶನದಲ್ಲಿ ಹತ್ತು ಮಂದಿ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದಾರೆ.

ದಕ್ಷಿಣಕನ್ನಡಜಿಲ್ಲೆ, ಬಂಟ್ವಾಳ ತಾಲ್ಲೂಕಿನ ನರ‍್ಕಜೆ ಗ್ರಾಮದವರಾದ ಡಾ. ಎನ್.ಎಸ್.ದೇವಕಿ ಅವರು ಪ್ರಸ್ತುತ ಮೈಸೂರಿನ ನಿವಾಸಿಯಾಗಿದ್ದಾರೆ. ಇವರ ಪತಿ ಗಣೇಶ್‌ರವರು ರಂಗರಾವ್‌ಅಂಡ್ ಸನ್ಸ್ಅಗರಬತ್ತಿ ಸಂಸ್ಥೆಯಲ್ಲಿ ಚಾರ್ಟೆಡ್‌ ಅಕೌoಟೆoಟ್‌ ಆಗಿದ್ದಾರೆ. ಇವರ ಇಬ್ಬರು ಪುತ್ರರು ಇಂಜಿನಿಯರಿoಗ್ ಪದವೀಧರರಾಗಿದ್ದು ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾರೆ.

ಡಾ. ಎನ್.ಎಸ್.ದೇವಕಿ ಅವರನ್ನು ಕನ್ನಡ ವಿಭಾಗದ ಮುಖ್ಯಸ್ಥಡಾ. ಸಿ.ಡಿ.ಪರಶುರಾಮ, ಪ್ರಾಧ್ಯಾಪಕರಾದ ಡಾ. ಎಂ.ಎಸ್.ವಸoತಮ್ಮ, ಡಾ.ಜಿ. ಶ್ರೀನಿವಾಸ್, ಡಾ.ಕೋಕಿಲ, ಡಾ ಎಂ.ಪಿ.ರೇಖಾ ಅವರುಗಳು ಸನ್ಮಾನಿಸಿ ಅಭಿನಂದನಾ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular