ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ಅಭಿವೃದ್ದಿಗೆ ಗಣನೀಯವಾದ ಕೊಡುಗೆ ನೀಡುವುದರ ಜತೆಗೆ ಪಟ್ಟಣದಲ್ಲಿ ಎರಡು ದಶಕಗಳ ಹಿಂದೆ ನವ ನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆರಂಭಿಸಿ ಜನರ ಆರ್ಥಿಕಾಭಿವೃದ್ದಿಗೆ ಕಾರಣರಾಗಿರುವ ಮಾಜಿ ಸಚಿವ ದಿ.ಎಸ್.ನಂಜಪ್ಪನವರ ಕುಟುಂಬ ಮೈ ಚಳಿ ಬಿಟ್ಟು ರಾಜಕೀಯಕ್ಕೆ ಸಂಪೂರ್ಣವಾಗಿ ದುಮುಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ನವ ನಗರ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ನಡೆದ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರ ೫೨ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶುಭಾಷಯ ಕೋರಿ ಮಾತನಾಡಿದ ಅವರು ನಿಮ್ಮ ಕುಟುಂಬದ ಜೊತೆಯೂ ಜನರಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರೊಡನೆ ಬೆರೆತು ಗಟ್ಟಿಯಾಗಿ ನಿಂತು ರಾಜಕಾರಣ ಮಾಡದಿದ್ದರೆ ಅದು ಎಸ್.ನಂಜಪ್ಪನವರಿಗೆ ಮಾಡುವ ಅಪಮಾನವಾಗುತ್ತದೆ ಎಂದರಲ್ಲದೆ ರಾಜಕೀಯ ಅಧಿಕಾರ ಯಾರ ಸ್ವತ್ತು ಅಲ್ಲ ಅದು ಜನರ ತೀರ್ಮಾನವಾಗಿದೆ ಎಂದು ತಿಳಿಸಿದರು.
ಕೆ.ಎನ್.ಬಸಂತ್ ಅವರಂತಹ ನಾಯಕರ ಅವಶ್ಯಕತೆ ಕ್ಷೇತ್ರದ ಜನತೆಗೆ ಬೇಕಿದ್ದು ಜನರನ್ನು ನಂಬಿ ರಾಜಕೀಯ ಮಾಡಿದರೆ ಅವರು ನಿಮ್ಮನ್ನು ಕೈ ಬಿಡುವುದಿಲ್ಲಾ ಇದರೊಂದಿಗೆ ಇಂದಿನ ದಿನಗಳಲ್ಲಿ ಅಧಿಕಾರವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲದಿರುವುದರಿಂದ ಜನರ ಒತ್ತಾಸೆಯಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಭವಿಷ್ಯದಲ್ಲಿ ನವ ನಗರ ಬ್ಯಾಂಕ್ ಅಧ್ಯಕ್ಷರಿಗೆ ಉತ್ತಮ ರಾಜಕೀಯ ಅವಕಾಶ ದೊರೆತು ಉತ್ತುಂಗಕ್ಕೇರಲಿ ಎಂದು ಎಚ್.ವಿಶ್ವನಾಥ್ ಹಾರೈಸಿದರು. ಈ ಸಂದರ್ಭದಲ್ಲಿ ಕೆ.ಎನ್.ಬಸಂತ್ ಸ್ನೇಹಿತರು ಮತ್ತು ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಜನ್ಮದಿನದ ಶುಭಾಷಯ ಕೋರಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಿವುನಾಯಕ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ಸಂತೋಷ್‌ಗೌಡ, ಶಂಕರ್‌ಸ್ವಾಮಿ, ಮಾಜಿ ಸದಸ್ಯ ಎನ್.ಶಿವಕುಮಾರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಕಾಂಗ್ರೆಸ್ ಮುಖಂಡ ಜಿ.ಎಸ್.ವೆಂಕಟೇಶ್, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಕುಚೇಲ್, ಮಾಜಿ ಖಜಾಂಚಿ ಹೆಚ್.ಪಿ.ಶಿವಣ್ಣ, ನವ ನಗರ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ವ್ಯವಸ್ಥಾಪಕ ಎಂ.ಪಿ.ಸುಹಾಸ್, ಮುಖಂಡರಾದ ಹೆಚ್.ಎಸ್.ವೇಣುಗೋಪಾಲ್, ಸುಜಯ್‌ಗೌಡ, ಡೈರಿಪ್ರಕಾಶ್, ಶಿಕ್ಷಕರಾದ ರಾಜಶೇಖರ, ಪುರುಷೋತ್ತಮ, ಪಾಲಾಕ್ಷ ಮತ್ತಿತರರು ಇದ್ದರು.