Thursday, May 29, 2025
Google search engine

Homeರಾಜ್ಯಸುದ್ದಿಜಾಲನಿವೇಶನಕ್ಕಾಗಿ ದಶಕಗಳಿಂದ ಕಾಯುತ್ತಿರುವ ಬಡ ಕುಟುಂಬಗಳ ಅನಿರ್ಧಿಷ್ಟಾವಧಿ ಧರಣಿ

ನಿವೇಶನಕ್ಕಾಗಿ ದಶಕಗಳಿಂದ ಕಾಯುತ್ತಿರುವ ಬಡ ಕುಟುಂಬಗಳ ಅನಿರ್ಧಿಷ್ಟಾವಧಿ ಧರಣಿ

ಮಂಗಳೂರು (ದಕ್ಷಿಣ ಕನ್ನಡ) ದಕ್ಷಿಣ ಕನ್ನಡ ಜಿಲ್ಲೆಯ ಕುಪ್ಪೆಪದವು ಗ್ರಾಮದಲ್ಲಿ ಸ್ವಂತ ಮನೆ, ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಪಂಚಾಯತ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು.

ಆದರೆ, ಹಕ್ಕುಪತ್ರ ನೀಡಿ ಆರು ವರ್ಷ ಕಳೆದರೂ 97 ಕುಟುಂಬಳಿಗೂ ನಿವೇಶನ ಹಸ್ತಾಂತರ ಮಾಡಲಿಲ್ಲ. ಕಾದು ಬಸವಳಿದ ಈ ಬಡ ಕುಟುಂಬಗಳು ಈಗ ಸ್ಥಳೀಯ ಕಾರ್ಮಿಕ ಸಂಘಟನೆಗಳು, ಸಿಪಿಐಎಂ ಮುಖಂಡರ ಮಾರ್ಗದರ್ಶನದಲ್ಲಿ ಹೋರಾಟ ಸಮಿತಿ ರಚಿಸಿ ಹೋರಾಟ ಶುರು ಮಾಡಿದ್ದಾರೆ. ಕಳೆದ ಜನವರಿಯಿಂದ ಧರಣಿ, ಪ್ರತಿಭಟನೆ ನಡೆಸಿದರೂ ನ್ಯಾಯ ದೊರಕದ ಹಿನ್ನಲೆಯಲ್ಲಿ ಈಗ ಕುಪ್ಪೆಪದವು ಗ್ರಾಪಂ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ. ನಿನ್ನೆ ಮಹಾಮಳೆಯನ್ನೂ ಲೆಕ್ಕಿಸದೆ ಬಡ ನಿವೇಶನ ಸಂತ್ರಸ್ತರು ಅನಿರ್ಧಿಷ್ಟಾವಧಿ ಧರಣಿಗೆ ಚಾಲನೆ ನೀಡಿದ್ದಾರೆ. ಸಂಜೆ ಸ್ಥಳಕ್ಕೆ ತಾಲೂಕು ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ್ದಾರೆ. ಆದಷ್ಟು ಬೇಗ ನಿವೇಶನ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ಆರು ವರ್ಷಗಳ ಕಾಲ ಭರವಸೆಗಳನ್ನಷ್ಟೆ ಕೇಳಿ ಭ್ರಮನಿರಸನ ಗೊಂಡಿರುವ ನಿವೇಶನ ರಹಿತರು ತಾಲೂಕು ಆಡಳಿತದ ಭರವಸೆಗೆ ಬಗ್ಗದೆ, ನಿವೇಶನ ಸ್ವಾಧೀನದನ ಲಿಖಿತ ಪತ್ರ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಿನ್ನೆ ರಾತ್ರಿ 8 ಗಂಟೆಯವರೆಗೂ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು ಪ್ರತಿಭಟನಾಕಾರರ ದೃಢ ನಿಲುವಿನಿಂದ ವಾಪಾಸ್ ಆಗಿದ್ದಾರೆ.

ಆ ತರುವಾಯ ರಾತ್ರೆಯೂ ಧರಣಿ ಮುಂದುವರಿದಿದ್ದು ಈಗ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

RELATED ARTICLES
- Advertisment -
Google search engine

Most Popular