Monday, June 9, 2025
Google search engine

Homeಅಪರಾಧಕಾನೂನುಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರ ಬಿಡುಗಡೆ ವಿಚಾರ: ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆ

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರ ಬಿಡುಗಡೆ ವಿಚಾರ: ಸುಪ್ರೀಂ ಕೋರ್ಟ್‌ನಿಂದ ಹಿನ್ನಡೆ

ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ ಬಿಡುಗಡೆಯ ಬಗ್ಗೆ ಉಂಟಾಗಿರುವ ವಿವಾದ ಇದೀಗ ಸುಪ್ರೀಂ ಕೋರ್ಟ್ ಬಾಗಿಲಿಗೆ ತಲುಪಿತ್ತು. ಆದರೆ, ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಿರಾಕರಿಸಿ, ಸಮಸ್ಯೆ ಕರ್ನಾಟಕ ಹೈಕೋರ್ಟ್ನಲ್ಲೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡಿಗರು ಹಾಗೂ ಸಂಘಟನೆಗಳು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದವು. ಇದರಿಂದ ಪ್ರಭಾವಿತವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರ ಬಿಡುಗಡೆಗೆ ನಿಷೇಧ ಹೇರಿತ್ತು.

ಕಮಲ್ ಹಾಸನ್ ಪರ ವಕೀಲರು ಹೈಕೋರ್ಟಿನಲ್ಲಿ ಈ ನಿಷೇಧದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಕಮಲ್ ಹಾಸನ್ ಅವರನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿತು. “ಭಾಷಾ ತಜ್ಞರಾ ನೀವು? ಅಥವಾ ಇತಿಹಾಸಕಾರರಾ? ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ನೀವು ಕ್ಷಮೆ ಕೇಳಬೇಕಲ್ಲವೆ?” ಎಂದು ತೀವ್ರ ಪ್ರಶ್ನೆ ಮಾಡಿದ ನ್ಯಾಯಾಲಯ, ಚಿತ್ರ ಬಿಡುಗಡೆ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆದೇಶ ನೀಡಿತ್ತು.

ಈ ತಾತ್ಕಾಲಿಕ ನಿರ್ಬಂಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರೂ, ಅದರಿಂದ ಕಮಲ್ ಹಾಸನ್‌ಗೆ ಮತ್ತೊಂದು ಹಿನ್ನಡೆ ಎದುರಾಗಿದೆ. High Court ವಿಚಾರಣೆಯ ನಂತರ ಮಾತ್ರ ಚಿತ್ರ ಬಿಡುಗಡೆ ಸಾಧ್ಯವಾಗಲಿದೆ.

RELATED ARTICLES
- Advertisment -
Google search engine

Most Popular