ಮಂಡ್ಯ :ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 31 ರಂದು ರಾಜ್ಯ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ಗೆ ಕರೆ ನೀಡಿದ್ದಾರೆ. ಮಂಡ್ಯ ಡಿಸಿ ಕಚೇರಿಗೆ ರೈತರು ಮುತ್ತಿಗೆಯನ್ನು ಹಾಕಲಿದ್ದು, ಟನ್ ಕಬ್ಬಿಗೆ 4500 ರೂಪಾಯಿ ನಿಗದಿ ಮಾಡುವಂತೆ, ಎಪಿಎಂಸಿ ಕಾಯ್ದೆ ,ಗೋ ಹತ್ಯೆ ಕಾಯ್ದೆ ರದ್ದು ವಾಪಸ್ ಪಡೆಯುವಂತೆ ,ಪಂಪ್ ಸೆಟ್ ಗಳಿಗೆ 7:00 ಗಂಟೆ ವಿದ್ಯುತ್ ನೀಡುವಂತೆ, ಎಫ್ ಆರ್ ಪಿ ದರ ನೀಡುವಂತೆ, ಕೆ ಆರ್ ಎಸ್ ಡ್ಯಾಮ್ ನಿಂದ ನಾಲೆಗಳಿಗೆ ನೀರು ಹರಿಸಲು ಹಾಗೂ ರೈತರಿಗೆ ಹೊಸ ಬೆಳೆ ಬೆಳೆಯಲು ಅವಕಾಶ ಮಾಡಿಕೊಡುವಂತೆ ಜೊತೆಗೆ ಹಾಲಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪು ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.